ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯೋಗರಾಜರ ಗಾಳಿಪಟ
ಸುದ್ದಿ/ಗಾಸಿಪ್
Feedback Print Bookmark and Share
 
ಮುಂಗಾರು ಮಳೆ ಖ್ಯಾತಿಯ ಯೋಗರಾಜ ಭಟ್ರ ಯೋಗ ಏಕಾಏಕಿ ಬದಲಾಗಿದೆ. `ಗಾಳಿಪಟ' ಚಿತ್ರದ ಪಾತ್ರಕ್ಕೆ ಕಾಮಿಡಿಟೈಂ ಗಣೇಶ್ ಹಾಗೂ ಕನ್ನಡತಿ ಭಾವನಾರಾವ್ ಆಯ್ಕೆಯಾಗಿದ್ದಾರೆ.

ಚಿತ್ರದ ಚಿತ್ರೀಕರಣವನ್ನು ಆಗುಂಬೆ, ತೀರ್ಥಹಳ್ಳಿ, ಕೊಡಚಾದ್ರಿ ಬೆಟ್ಟಗಳ ಸಾಲುಗಳಲ್ಲಿ ಈ ತಿಂಗಳ ಕೊನೆಯವರೆಗೂ ಬಿಡುವಿಲ್ಲದೆ ನಡೆಸಲಾಗುತ್ತದೆ.

ಈಗಾಗಲೇ ಗಾಳಿಪಟ ಚಿತ್ರದ ಕಥೆ,ಚಿತ್ರಕಥೆ ಎಲ್ಲವೂ ಸಿದ್ದವಾಗಿದೆ,ಇನ್ನು ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ಆರಂಭಿಸುವುದು ಮಾತ್ರ ಬಾಕಿ ಉಳಿದಿರುವುದು.

ಹದಿಹರೆಯದವರ ಹುಚ್ಚು ಕನಸುಗಳ ಸುತ್ತ ಹಾರಾಡುವ ಗಾಳಿ ಪಟ ಬಾಕ್ಸ್ ಆಫೀಸನ್ನು `ಧೂಳೀಪಟ' ಮಾಡುತ್ತದೋ ಇಲ್ಲವೋ ಕಾದು ನೋಡಬೇಕು. ಚಿತ್ರವನ್ನು ಎನ್. ಸೂರ್ಯಪ್ರಕಾಶ್ ಮತ್ತು ಎ. ಎಂ. ರತ್ನಂರವರು ನಿರ್ಮಿಸುತ್ತಿದ್ದಾರೆ.