ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಿರುತೆರೇಲಿ ಕಿರಿಕ್ ಇಲ್ಲ!!
ಸುದ್ದಿ/ಗಾಸಿಪ್
Feedback Print Bookmark and Share
 
ಜಯಶ್ರೀ ರಾಜ್ ಇಂದು ಕನ್ನಡದ ಕಿರುತೆರೆ ಧಾರವಾಹಿಗಳಲ್ಲಿ ಮಿಂಚುತ್ತಿರುವ ತಾರೆ. ಟಿ.ಎನ್. ಸೀತಾರಾಂ ನಿರ್ದೇಶನದ `ಕಥೆಗಾರ' ಧಾರವಾಹಿಯಿಂದ ಶುರುವಾದ ಪಯಣ `ಭೃಂಗದ ಬೆನ್ನೇರಿ' ತನಕ ನಿರಾತಂಕವಾಗಿ ಸಾಗಿದೆ.

ಕಿರುತೆರೆ ಧಾರವಾಹಿಗಳಲ್ಲಿ ಅದರಲ್ಲೂ ಮೆಗಾ ಧಾರವಾಹಿಗಳಲ್ಲಿ ನಟಿಸೋದ್ರಿಂದ ಜನ ಹೆಚ್ಚು ಗುರ್ತಿಸ್ತಾರೆ, ಒಂದು ರೀತಿಯ ಐಡೆಂಟಿಟಿ ಇರುತ್ತೆ. ಆದ್ರೆ ಸಿನಿಮಾಗಳು ಹಾಗಲ್ಲ

ಹೀಗೆ ಬಂದು ಹಾಗೆ ಹೋಗುತ್ತೆ ಎಲ್ಲೋ ಕೆಲವು ಜಡಿ ಮಳೆ ಥರ ಬಹಳ ಹೊತ್ತು ಇರಬೋದು ಅಷ್ಟೆ ಎನ್ನುವ ಜಯಶ್ರೀ ರಾಜ್ ತಮ್ಮ ಮಾಯಾ ಮೃಗದ ಶಾರದೆಯ ಪಾತ್ರ,

ಮನ್ವಂತರದ ಮಾಯಾ, ಪುಣ್ಯಕೋಟಿಯ ಸಹನಾ ಪಾತ್ರಗಳು ಅದಕ್ಕೆ ಇಂದೂ ಸಿಗುತ್ತಿರುವ ಜನ ಮನ್ನಣೆಯನ್ನು ಉದಾಹರಿಸುತ್ತಾರೆ.

ಅವರ ಪ್ರಕಾರವೇ ಸಿನಿಮಾಕ್ಕಿಂತ ಇಂದು ಧಾರವಾಹಿಗಳು ಹೆಚ್ಚು ಜನಪ್ರಿಯವಾಗುತ್ತಿವೆ.ಅದಕ್ಕೆ ತಕ್ಕಂತೆ ಧಾರವಾಹಿಗಳಲ್ಲಿನ ವಿಭಿನ್ನ ಪಾತ್ರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಇರುತ್ತವೆ.

ಪ್ರತಿದಿನವೂ ಅವರು ಯಾವುದೇ ಕೆಲಸವನ್ನು ತಪ್ಪಿಸಿದರೂ,ಧಾರವಾಹಿಯನ್ನು ನೋಡಲು ತಪ್ಪಿಸುವುದಿಲ್ಲ ಎಂದೆನ್ನುತ್ತಾರೆ ಜಯಶ್ರೀರಾಜ್.