ಪುನೀತ್ ಜೊತೆಯಾಗಿ ಹಂಸಿಕಾ
ಬೆಂಗಳೂರು, ಗುರುವಾರ, 26 ಜುಲೈ 2007( 15:22 IST )
ಚಿತ್ರರಂಗದ ಅದೃಷ್ಟದ ಬೆಡಗಿ ಎಂದು ಹೆಸರುವಾಸಿಯಾದ ಕೋಯಿ ಮಿಲ್ ಗಯಾ ಚಿತ್ರದಲ್ಲಿ ಪಾತ್ರವಹಿಸಿದ ನಟಿ ಹಂಸಿಕಾ ಕನ್ನಡ ಚಿತ್ರರಂಗಕ್ಕೆ ಲಗ್ಗೆ ಹಾಕಿದ್ದಾಳೆ.
ಪುನೀತ್ ಚಿತ್ರದಲ್ಲಿ ನಾಯಕಿ ನಟಿಯಾಗಿ ಬಿಂದಾಸ್ ಚಿತ್ರದಲ್ಲಿ ನಟಿಸುತ್ತಿದ್ದು ಕನ್ನಡದಲ್ಲಿ ನೆಲೆಸುವ ಸಾಧ್ಯತೆಗಳನ್ನು ಸೃಷ್ಟಿಸಿದ್ದಾಳೆ.
ಬಾಲಿವುಡ್‌ನಲ್ಲಿ ನಟಿಸಿದ ಚಿತ್ರಗಳು ಸೂಪರ್ ಹಿಟ್ ಆಗಿದ್ದರೂ ದಕ್ಷಿಣ ಚಿತ್ರರಂಗಕ್ಕೆ ಲಗ್ಗೆ ಹಾಕಿದ್ದಲ್ಲದೇ ಟಾಲಿವುಡ್‌ನಲ್ಲಿ ದೇಶಮುಡು ಚಿತ್ರದಲ್ಲಿ ನಟಿಸಿ ಭರ್ಜರಿ ಯಶಸ್ವನ್ನು ಕಂಡಿದ್ದಾಳೆ.
ತನ್ನ ಪ್ರಬುದ್ದ ನಟನೆಯಿಂದಾಗಿ ಹಾಗೂ ಉತ್ತಮ ನೃತ್ಯಗಾತಿಯಾಗಿದ್ದರಿಂದ ಚಿತ್ರಗಳು ಯಶಸ್ಸುಕಾಣುತ್ತಿವೆ ಎನ್ನುವುದು ಚಿತ್ರರಂಗದ ದಿಗ್ಗಜರ ಅಭಿಪ್ರಾಯವಾಗಿದೆ.
ಹಿಮೇಶ್ ನಿರ್ಮಾಣದ ಆಪ್ ಕಾ ಸೂರುರ್ ಚಿತ್ರ ದೇಶಾದ್ಯಂತ ಭಾರಿ ಯಶಸ್ಸನ್ನು ಕಂಡ ಹಿನ್ನೆಲೆಯಲ್ಲಿ ತಾರೆ ಹಂಸಿಕಾಗೆ ಭಾರಿ ಬೇಡಿಕೆ ಉಂಟಾಗಿದೆ.
ತಾರೆ ಹಂಸಿಕಾಳ ಉತ್ತಮ ನಟನೆ ಹಾಗೂ ಅವರು ನಟಿಸಿದ ಎಲ್ಲ ಚಿತ್ರಗಳು ಸಫಲತೆ ಪಡೆದ ಹಿನ್ನೆಲೆಯಲ್ಲ ಪುನೀತ್ ತಮ್ಮ ಬಿಂದಾಸ್ ಚಿತ್ರಕ್ಕೆ ಹಂಸಿಕಾಳನ್ನು ತಮ್ಮ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಅವರ ಬಿಂದಾಸ್ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸೋಣವೇ.