ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸ್ನೇಹಾನಾ...ಪ್ರೀತೀನಾ...
ಸುದ್ದಿ/ಗಾಸಿಪ್
Feedback Print Bookmark and Share
 
ನಮನಾ ಬ್ಯಾನರ್‌ ಅಡಿಯಲ್ಲಿ ಅನಾಜಿ ನಾಗರಾಜ್‌ ಅವರು ನಿರ್ಮಾಪಕತ್ವದಲ್ಲಿ ಸಾಹುಜಿ ಶಿಂಧೆ ಅವರ ನಿರ್ದೇಶನ ಹರಿಕೃಷ್ಣ ಅವರ ಸಂಗೀತವಿರುವ ಸ್ನೇಹಾನಾ...ಪ್ರೀತೀನಾ ಚಿತ್ರ ಅದ್ಧೂರಿಯಿಂದ ಸೆಟ್ಟೇರುತ್ತಿದೆ.

ತಾರಾಗಣದಲ್ಲಿ ನಾಯಕ ದರ್ಶನ್ ಹಾಗೂ ಆದಿತ್ಯ ಅವರು ನಟಿಸುತ್ತಿದ್ದು ಲಕ್ಷ್ಮಿರೈ ಮತ್ತು ಸಿಂಧು ತೊಲಾನಿ ಅವರುಗಳು ನಾಯಕಿಯರಾಗಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ರಂಗಾಯಣ ರಘು, ರಾಜೀವ್, ಸಾಧು ಕೋಕಿಲಾ ಅವರುಗಳು ಕಾಮೆಡಿ ಪಾತ್ರಧಾರಿಗಳಾಗಿ ನಟಿಸುತ್ತಿದ್ದಾರೆ.

ಹಿಂದಿ ಚಿತ್ರ ಇಶ್ಕ್ ರೀಮೇಕ್ ಚಿತ್ರವಾದ ಸ್ನೇಹಾನಾ ಪ್ರೀತೀನಾ ಮೊದಲಾರ್ಧದಲ್ಲಿ ಪ್ರೇಕ್ಷಕರನ್ನು ರಂಜಿಸುವುದಾಗಿದೆ ನಂತರಾರ್ಧದಲ್ಲಿ ಮಸಾಲೆ ದೃಶ್ಯಗಳು ಹೊಡೆದಾಟಗಳು ಹೇರಳವಾಗಿವೆ.

ಚಿತ್ರದ ಹಾಡುಗಳಿಗಾಗಿ ಸ್ವಿಟ್ಜರ್‌ಲ್ಯಾಂಡ್ ಮತ್ತು ಬ್ಯಾಂಕಾಕ್‌ನ ಸುಂದರ ಹೊರಾಂಗಣ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಚಿತ್ರವನ್ನು ಸಂಪೂರ್ಣವಾಗಿ ಪ್ರೇಕ್ಷಕರನ್ನು ಸೆಳೆಯವಲ್ಲಿ ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ಇದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಅನಾಜಿ ನಾಗರಾಜ್.