ಪ್ರೀತಿ ಏಕೆ... ಅಂತಿಮ ಚಿತ್ರೀಕರಣ
ಬೆಂಗಳೂರು, ಸೋಮವಾರ, 30 ಜುಲೈ 2007( 16:22 IST )
ನಿರ್ದೇಶಕ ಹಾಗೂ ನಟ ಪ್ರೇಮ್ ಅವರ ಬಹು ನಿರೀಕ್ಷಿತ ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದೆ.
ಜೋಗಿ ಚಿತ್ರದ ಯಶಸ್ಸಿನ ನಂತರ ಸುದೀರ್ಘ ಸಮಯ ತೆಗೆದುಕೊಂಡಿರುವ ಈ ಚಿತ್ರದ ಅಂತಿಮ ಹಂತ ಚಿತ್ರೀಕರಣ ಬೆಂಗಳೂರಿನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆಯಿತು.
ಪ್ರೇಮ್ ಚಿತ್ರದ ಚಿತ್ರೀಕರಣದುದ್ದಕ್ಕೂ ಹೊಸಹೊಸ ಪ್ರಯೋಗಗಳನ್ನು ಮಾಡು ತ್ತಲೇ ಬಂದಿದ್ದರು. ಹೊಸಬಗೆಯ ಪ್ರಚಾರ ತಂತ್ರಗಳನ್ನು ಚಿತ್ರೀಕರಣದುದ್ದಕ್ಕೂ ಅನುಸರಿಸುತ್ತಲೇ ಬಂದಿದ್ದ ಪ್ರೇಮ್,ಈ ಬಾರಿ ನೃತ್ಯಕ್ಕೆ ಆರಿಸಿಕೊಂಡಿದ್ದು, ನಗರದ ಜನಜಂಗುಳಿಯ ಬಿಎಂಟಿಸಿ ಬಸ್ ನಿಲ್ದಾಣವನ್ನು.
ಸುರಿಯುವ ಮಳೆಯನ್ನೂ ಲೆಕ್ಕಿಸದೆ ಚಿತ್ರ ತಂಡ ಈ ನೃತ್ಯದ ಚಿತ್ರೀಕರಣದಲ್ಲಿ ಭಾಗವಹಿಸಿತು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಚಿತ್ರೀಕರಣವನ್ನು ವೀಕ್ಷಿಸಿದರು. ವಿಭಿನ್ನ ಶೈಲಿಯ ನೃತ್ಯದ ದೃಶ್ಯಗಳ ಚಿತ್ರೀಕರಣಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.