ಸುದ್ದಿ/ಗಾಸಿಪ್
|
ಸಿನಿಮಾ ಮುನ್ನೋಟ
|
ಸಿನಿಮಾ ವಿಮರ್ಶೆ
|
ತಾರಾ ಪರಿಚಯ
ಮುಖ್ಯ ಪುಟ
ಮನರಂಜನೆ
»
ಸ್ಯಾಂಡಲ್ ವುಡ್
»
ಸುದ್ದಿ/ಗಾಸಿಪ್
»
ಕನ್ನಡ ಚಿತ್ರದಲ್ಲಿ ನಟಿಸಲ್ಲ:ಸೊನಾಲಿ
ಸುದ್ದಿ/ಗಾಸಿಪ್
Feedback
Print
ಕನ್ನಡ ಚಿತ್ರದಲ್ಲಿ ನಟಿಸಲ್ಲ:ಸೊನಾಲಿ
ಬೆಂಗಳೂರು, ಶನಿವಾರ, 4 ಆಗಸ್ಟ್ 2007( 09:40 IST )
WD
NRB
ಕನ್ನಡ ಚಿತ್ರಗಳಲ್ಲಿ ಎಂದೂ ನಟಿಸಲ್ಲ ಎಂದಿದ್ದು ಬಾಲಿವುಡ್ ಹೆಸರಾಂತ ನಟಿ ಸೊನಾಲಿ ಬೇಂದ್ರೆ.
ಆಭರಣ ಕಂಪೆನಿಯ ರಾಯಭಾರಿಯಾಗಿ ನಗರಕ್ಕೆ ಆಗಮಿಸಿರುವ ಅವರು ತಮ್ಮ ಅನಿಸಿಕೆಯನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದು ಹೀಗೆ.
ಹಿಂದೊಮ್ಮೆ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದೆ. ಆದರೆ ಅದೊಂದು ಕೆಟ್ಟ ಅನುಭವವಾಗಿತ್ತು. ಅಂದೇ ಕನ್ನಡದಲ್ಲಿ ನಟಿಸೋ ಬಗ್ಗೆ ಯೋಚನೆಯನ್ನೂ ಮಾಡಲಾರೆ ಎಂದು ತೀರ್ಮಾನಿಸಿದ್ದೆ ಎಂದರು.
ಸೊನಾಲಿ ಈ ಹಿಂದೆ ಡಿ.ರಾಜೇಂದ್ರ ಬಾಬು ನಿರ್ದೇಶನದ ಪ್ರೀತ್ಸೆ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ನಟಿಸಿದ್ದರು.
ಸದ್ಯ ಬಾಲಿವುಡ್ ಚಿತ್ರಗಳಲ್ಲೂ ಅಭಿನಯಿಸುತ್ತಿಲ್ಲ. ಈಗೇನಿದ್ದರೂ ಹೌಸ್ ವೈಫ್ ಎಂದು ಮುಗುಳ್ನಕ್ಕರು. ಬೆಂಗಳೂರು ನನ್ನ ಇಷ್ಟದ ನಗರ.
ಕನ್ನಡದಲ್ಲಿ ಅನಂತನಾಗ್ ಅತ್ಯುತ್ತಮ ನಟ. ಅವರ ಪರಿಚಯ ಕಾರಣದಿಂದಲೇ ಕನ್ನಡದಲ್ಲಿ ಅಭಿನಯಿಸಿದೆ ಎಂದರು.
ಮತ್ತಷ್ಟು
ಜ್ಞಾನ ಜ್ಯೋತಿ ಸಿದ್ಧಗಂಗಾಗೆ ಗೀತೆ
ಪ್ರೀತಿ ಏಕೆ... ಅಂತಿಮ ಚಿತ್ರೀಕರಣ
ಸ್ನೇಹಾನಾ...ಪ್ರೀತೀನಾ...
ಪುನೀತ್ ಜೊತೆಯಾಗಿ ಹಂಸಿಕಾ
ಕಿರುತೆರೇಲಿ ಕಿರಿಕ್ ಇಲ್ಲ!!
ಯೋಗರಾಜರ ಗಾಳಿಪಟ