'ವಾರಸ್ದಾರ'ನಿಗೆ ಶೂಟಿಂಗ್
ಬೆಂಗಳೂರು, ಗುರುವಾರ, 9 ಆಗಸ್ಟ್ 2007( 11:46 IST )
ಕನ್ನಡ ಪತ್ರಿಕೋದ್ಯಮದಲ್ಲಿ ರವಿ ಬೆಳಗೆರೆ ಒಂದು ಅಭೂತ ಪೂರ್ವ ಹೆಸರು. ಸಾಹಿತ್ಯ ಕ್ಷೇತ್ರದ ದಾಖಲೆ ವೀರನೀಗ ಚಿತ್ರರಂಗದಲ್ಲೂ ಹಿಂದೆ ಬಿದ್ದಿಲ್ಲ.
ವಾರಸ್ದಾರ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಇದೀಗ ಸೆಟ್ಟೇರುತ್ತಿದ್ದಾರೆ. ಈ ಚಿತ್ರದ ಮಹೂರ್ತ ಇತ್ತೀಚೆಗೆ ಶೂಟಿಂಗ್ ಟೆಂಪಲ್ ಎಂದೇ ಹೆಸರಾದ ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿ ಆಲಯದಲ್ಲಿ ನೆರವೇರಿತು.
ನೊಂದವರಿಗೆ ಸಾಂತ್ವನ ನೀಡುವ ವಾರಸ್ದಾರ ಸಮಾಜ ಸೇವಾ ಪರ. ಕಿರುತೆರೆ, ಎಫ್.ಎಂ.ರೇಡಿಯೋಗಳಲ್ಲಿ ಸದಾ ಮಿಂಚುತ್ತಿರುವ ವಾರಸ್ದಾರ ಈ ಟಿವಿಯಲ್ಲಿ ಪ್ರಸಾರವಾಗುತ್ತಿಉವ ರಾಧಾ ಧಾರವಾಹಿಯ ಪ್ರಧಾನ ಪಾತ್ರವೊಂದರಲ್ಲೂ ನಟಿಸುತ್ತಿದ್ದಾರೆ.
ಪತ್ರಿಕೆ, ಕಿರುತೆರೆ, ಹಿರಿತೆರೆ, ಇನ್ನೊಂದೆಡೆ ಸ್ಕೂಲು ಹೀಗೆ ಎಡೆಬಿಡದೆ ಕಾರ್ಯನಿರ್ವಹಿಸೋ ನಿಮ್ಮ ಯಶಸ್ಸಿನ ಗುಟ್ಟೇನು ಅಂದ್ರೆ ಕೆಲಸದ ಒತ್ತಡ ಜಾಸ್ತಿಯಾಗಿದೆ. ಚಿತ್ರರಂಗದ ಕೆಲಸ ಕಡಿಮೆ ಮಾಡಬೇಕು. ಆದರೂ ಚಿತ್ರರಂಗ ಅಂದ್ರೆ ಅದೇನೋ ಹೆಚ್ಚೇ ಅಭಿಮಾನ ಎನ್ನುತ್ತಾರೆ ಬೆಳಗೆರೆ.
ಈ ಹಿಂದೆಯೇ ತನ್ನ ಪತ್ರಿಕೆ ಹಾಯ್ ಬೆಂಗಳೂರು ಹೆಸರಿನಲ್ಲಿ ಚಿತ್ರವೊಂದು ಬಂದಿತ್ತು. ಆದರೆ ನೀರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಗಳಿಸಿರಲಿಲ್ಲ.
ಅದಿರ್ಲಿ ಈ ವಾರಸ್ದಾರನ ಹಿನ್ನೆಲೆ ಏನು, ಕಥೆ ಏನು ಅಂತ ಕೇಳಿ ನೋಡಿ ? ಕಥೆ ಇನ್ನೂ ಬಹಿರಂಗಗಂಡಿಲ್ಲ. ನಗರದ ಹೊರವಲಯದಲ್ಲಿ ಭರದಿಮದ ಶೂಟಿವಂಗ್ ನಡೀತಿದೆ.
ಪೋಲೀಸ್ ಇಲಾಖೆಯಿಂದಾಗದ, ಕಾನೂನಿಂದ ಸರಿಪಡಿಸಲಾಗದ ಸಮಸ್ಯೆಗಳಿಗೆಲ್ಲಾ ಪರಿಹಾರ ಕೊಡಬಲ್ಲ ವಾರಸ್ದಾರ ಗೆಲ್ಲುತ್ತಾನೆ ಎಂಬುದು ಗಾಂಧಿನಗರದ ಮಂದಿಯ ಲೆಕ್ಕಾಚಾರ.