ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮುರುಳಿ ಬರುವರೇ ಮರಳಿ ಗೂಡಿಗೆ?
ಸುದ್ದಿ/ಗಾಸಿಪ್
Feedback Print Bookmark and Share
 
ಮುರುಳಿ ಮರಳುವರೇ? ಇದು ಇಂದು ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಗುಸು. ಚಂದ್ರ ಚಕೋರಿ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಂಡರೆ ಕಂಠಿ ರಾಜ್ಯ ಪ್ರಶಸ್ತಿ ಗೆದ್ದಿತ್ತು ಹಾಗಾಗಿ ಕನ್ನಡಿಗರ ಹೃದಯ ತಟ್ಟಿದ್ದ ಮುರುಳಿ ಮನದ ಮಾತಾಗಿದ್ದರು.

ಮೊದಲಿಂದಲೂ ಮಣಿರತ್ನಂ ನಿರ್ದೇಶನದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದ ಮುರುಳಿಗೆ ನಟನೆಯಲ್ಲಿ ಆದರ್ಶ ಅವರ ಅಂಕಲ್ಲಾದ

ಾ|| ರಾಜ್ರಂತೆ. ಸಾಧಾರಣವಾಗಿ ಜೀನ್ಸ್, ಟೀ ಶರ್ಟ್ನ್ನೇ ಹೆಚ್ಚಾಗಿ ಇಷ್ಟ ಪಡುವ ಮುರುಳಿ ಒಂಥರಾ ಸಿಂಪಲ್ ಜೀವಿ. ಸಿನಿಮಾ ನೋಡೋದು, ಫ್ರೆಂಡ್ಸ್ಗಳ ಜೊತೆ ಹೆಚ್ಚಾಗಿ ಹರಟೆ ಹೊಡೆಯೋದು, ವಿಡಿಯೋ ಗೇಂಗಳನ್ನು ಆಡುತ್ತಾ ಕಾಲ ಕಳೆಯುವ ಮುರುಳಿಗೆ ಓದಿನಲ್ಲಿ ಅಷ್ಟೇನು ಆಸಕ್ತಿ ಇರಲಿಲ್ಲ.

ಪಾಠಕೆ ಚಕ್ಕರ್ ಆಟಕೆ ಹಾಜರ್ ಎನ್ನುತ್ತಿದ್ದ ಮುರುಳಿ ಚಿತ್ರರಂಗಕ್ಕೆ ಬಂದದ್ದು ಆಕಸ್ಮಿಕವೇನಿಲ್ಲದಿದ್ದರೂ ಸುಲಭದ ಮಾತೇನಾಗಿರಲಿಲ್ಲ. ಓದಿನಲ್ಲಿ ಸೋತು ಸುಣ್ಣಗಾಗಿದ್ದ ಮುರುಳಿ ಚಿತ್ರರಂಗದಲ್ಲಿ ಎಲ್ಲರನ್ನು ಚಿತ್ ಮಾಡುವ ರೀತಿಯಲ್ಲಿ ಅಭಿನಯಿಸಬಲ್ಲರು ಎಂದ್ಯಾರು ಕನಸು ಕಂಡಿರಲಿಲ್ಲ.

ಯಾರ್ಯಾಕೆ ಸ್ವತಃ ಮುರುಳಿ ಸಹ. ತನ್ನ ಸೋದರ ವಿಜಯ್ ರಾಘವೇಂದ್ರನ ನಟನೆ ಬಗ್ಗೆ ಎಂದೂ ತಲೆ ಕೆಡಿಸಿಕೊಂಡಿಲ್ಲ .

ಮುರುಳಿ ಒಬ್ಬ ಅಭಿನಯಕಾರನಿಗಿರಬೇಕಾದ ಬಾಡಿ ಲ್ಯಾಂಗ್ವೇಜ್, ಡ್ರೆಸ್ ಹಾಗೂ ಹೇರ್ ಸ್ಟೈಲ್ ಬಗ್ಗೆ ಸುಧೀರ್ಘವಾಗಿ ಹರಟುತ್ತಿದ್ದ ಮುರುಳಿ ನಾನು ಮಾಡುವ ಪ್ರತಿ ಫ್ರೇಂಗೂ ದುಡ್ಡು ತೆಗೆದುಕೊಳ್ಳುತ್ತೇನೆ ಹಾಗಾಗೇ ಅದನ್ನ ಗೌರವಿಸಬೇಕು ಅದಕ್ಕೆ ಪೂರಕವಾದ ಅಭಿನಯ ಸಾಮರ್ಥ್ಯವನ್ನು ತೋರಬೇಕು ಎಂದು ವಿನಮ್ರನಾಗಿ ನುಡಿಯುತ್ತಿದ್ದ ಆ ಮುರುಳಿ ಇಂದೆಲ್ಲಿ?

ಕಂಠಿ ಚಿತ್ರದ ನಂತರ ಬಂದ ಯಶವಂತ್, ಗೋಪಿ ನೀರೀಕ್ಷಿಸಿದ ಮಟ್ಟಿಗೆ ಯಶಸ್ಸು ಕಾಣದಿದ್ದರೂ ಸಹ ಮುರುಳಿಯ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಮುರುಳಿ ಎಂದೂ ಸ್ಟಂಟ್ ಮೆನ್ಗಳನ್ನ ಅವಲಂಭಿಸಿರಲಿಲ್ಲ .

ಒಬ್ಬ ನಟ ಸ್ಟಂಟ್ ಹಾಗೂ ನಟನೆ ಎರಡನ್ನೂ ಸರಿದೂಗಿಸಿಕೊಂಡು ಹೋಗುವುದು ಅಷ್ಟೇನು ಸುಲಭಸಾಧ್ಯದ ಮಾತಲ್ಲ ಜೊತೆಗೆ ನಿಜವಾದ ಒಬ್ಬ ನಟ ಎಂದೂ ಪ್ರೇಕ್ಷಕನನ್ನ ಮೂರ್ಖನಾಗಿಸಲು ಸಾಧ್ಯವಿಲ್ಲ ಏಕೆಂದರೆ ಅವನು ಕಣ್ಣುಗಳು ಸದಾ ಮಾತಾಡುತ್ತಿರುತ್ತವೆ ನಾನು ನಟನೆಯನ್ನು ಇಷ್ಟ ಪಡುತ್ತೇನೆ ಎಂದು ಕಣ್ಣರಳಿಸುತ್ತಿದ್ದ ಆ ಮುರುಳಿಯೆಲ್ಲಿ?

ಇಷ್ಟೆಲ್ಲಾ ಪೀಠಿಕಾಯಣಗಳಿಗೆ ಮೂಲಭೂತ ಕಾರಣವೊಂದಿದೆ. ಅದೆಂದರೆ ಮುರುಳಿ ಇದ್ದಕ್ಕಿದ್ದಂತೆ ಬೆಂಗಳೂರು ಬಿಟ್ಟು ಹೈದರಾಬಾದಿಗೆ ಹೋಗಿದ್ದಾರಂತೆ ಅದೂ ತೆಲುಗು ಸಿನಿಮಾದಲ್ಲಿ ನಟಿಸಲು ಅದೂ ನಾಯಕ ಪಾತ್ರಧಾರಿಯಾಗಿ.

ಅಬ್ಬಾ ಕನ್ನಡದ ಕಂದ ಮುರುಳಿ ತೆಲುಗಿನ ಮೆಟ್ಟಿಲೇರುತ್ತಿದ್ದಂತೆ ಗಾಂಧಿನಗರದ ಚುಮು ಚುಮು ಛಳಿಯಲ್ಲಿ ನಡುಗುತ್ತಾ ಕೂತ ಅಭಿಮಾನಿಗಳು ಮುರುಳಿ ಮರಳಿ ಬರುವರೇ? ಎಂದು ಕೇಳುತ್ತಿದ್ದಾರಂತೆ.