ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೋದೆಯಾ ದೂರ ಓ ಜೊತೆಗಾತಿ
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡತಿ ರಮ್ಮಾ ಇತ್ತೀಚೆಗೇಕೋ ಮುಗುಮ್ಮಾಗಿದ್ದಾಳೆ. ಸಾಕಷ್ಟು ನೊಂದಂತೆ ಕಾಣುತ್ತಿರುವ ರಮ್ಯಾ ಕನ್ನಡ ಚಿತ್ರರಂಗದಿಂದ ದೂರ ಉಳಿಯುತ್ತಿದ್ದಾಳೆ.

ಪ್ರೀತಂ ನಿರ್ದೇಶನದ ಮುಂಗಾರು ಮಳೆ - 2, ಗಣೇಶ್ ಅಭಿನಯದ ಅರಮನೆ, ವಿಜಯರಾಘವೇಂದ್ರರ ಮಿಂಚಿನ ಓಟ ಚಿತ್ರಗಳಿಗೆ ಬಂದ ಅವಕಾಶಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ ರಮ್ಯಾ ಇತ್ತೀಚೆಗೆ ತೆಲಗು, ತಮಿಳು ಚಿತ್ರಗಳತ್ತ ಹೆಚ್ಚಿನ ಗಮನ ಕೊಡುತ್ತಿದ್ದಾಳಂತೆ.

ಆದರೆ ಪ್ರಸ್ತುತ ರಮ್ಯಾ ಉಪೇಂದ್ರ ಅಭಿನಯದ ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರದಲ್ಲಿ ಮಾತ್ರ ನಟಿಸುತ್ತಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಪುಂಖಾನುಪುಂಖವಾಗಿ ವಲಸೆ ಬಂದ ಪರಭಾಷಾ ನಟಿಯರ ಮೇಲುಗೈನಿಂದಾಗಿ ರಮ್ಯಾ ಮನನೊಂದು ಗಾಂಧೀನಗರಿ ತೊರೆದು ತೆಲುಗು, ತಮಿಳು ಚಿತ್ರಗಳನ್ನು ಅರಸಿ ಹೋಗಿದ್ದಾಳೆಂದು ಗುಸು ಗುಸುಗುಟ್ಟುತ್ತಿರುವ ರಮ್ಯಾ ಅಭಿಮಾನಿಗಳು ತಮ್ಮ ತಮ್ಮಲ್ಲೇ ಹೋದೆಯಾ ದೂರ ಓ ಜೊತೆಗಾತಿ ಎಂದು ಗುನುಗಿಕೊಳ್ಳುತ್ತಿದ್ದಾರಂತೆ.