ದಶಾವತಾರಿಣಿಗಳು
ಬೆಂಗಳೂರು, ಮಂಗಳವಾರ, 4 ಸೆಪ್ಟೆಂಬರ್ 2007( 17:13 IST )
ಸಿನಿಮಾರಂಗದಲ್ಲಿ ನಾಯಕ ಶಿಖಾಮಣಿಗಳು ಏಕಪಾತ್ರ, ದ್ವಿಪಾತ್ರ, ತ್ರಿಪಾತ್ರ ಎಂದು ಅಭಿನಯಿಸುವುದನ್ನು ಕೇಳಿದ್ದೇವೆ.
ಆದರೆ ನಾಯಕಿ ಮಣಿಗಳು ಆಗೊಮ್ಮೆ ಈಗೊಮ್ಮೆ ಅಭಿನಯಿಸುವುದುಂಟು. ನೀವೆಂದಾದರು ನಾಯಕಿಮಣಿಗಳು ಹತ್ತು ಪಾತ್ರಗಳಲ್ಲಿ ಅಭಿನಯಿಸುವುದರ ಬಗ್ಗೆ ಕಲ್ಪನೆ ಮಾಡಿಕೊಂಡಿದ್ದೀರಾ?
ಇದೀಗ ಆ ಮಾತು ಸತ್ಯವಾಗಿದೆ. ಜಯಶ್ರೀದೇವಿಯವರು ನಿರ್ಮಿಸುತ್ತಿರುವ ಭಕ್ತಿಪ್ರಧಾನವಾದ ಚಿತ್ರ ನವಶಕ್ತಿ ವೈಭವ ಚಿತ್ರದಲ್ಲಿ ಬರೋಬ್ಬರಿ ಹತ್ತು ಮಂದಿ ನಾಯಕಿಯರಿದ್ದಾರೆ.
ಶೃತಿ, ಪ್ರೇಮ, ಜಯಮಾಲಾ, ಸುಧಾರಾಣಿ, ವಿಜಯಲಕ್ಷ್ಮಿ, ರಾಧಿಕಾ, ಅನುಪ್ರಭಾಕರ್ ಹೀಗೆ ಹತ್ತು ಮಂದಿ ನಾಯಕಿಯರನ್ನು ದೇವತೆಗಳನ್ನಾಗಿ ವಿಜೃಂಭಿಸಿರುವುದು ಒಂದು ವಿಶೇಷ. ದಶಾವತಾರಿಣಿಗಳ ದಶಾಭುಕ್ತಿ ಹೇಗಿದೆಯೋ ಎಂಬುದನ್ನು ಈ ತಿಂಗಳ ಕೊನೆಗೆ ಬಿಡುಗಡೆಯಾಗುವ ಚಿತ್ರ ನೋಡಿಯೇ ತಿಳಿಯಬೇಕು.