ವಿದೇಶದಲ್ಲಿ ಲವಕುಶ
ಬೆಂಗಳೂರು, ಗುರುವಾರ, 6 ಸೆಪ್ಟೆಂಬರ್ 2007( 16:52 IST )
ಚಿತ್ರವೆಂದರೆ ಮೂರಾದರೂ ಹಾಡಿರಬೇಕು. ಅದರಲ್ಲಿ ಎರಡಾದರೂ ವಿದೇಶೀ ನೆಲದ ಸೊಗಡನ್ನು ಹೊಂದಿರಬೇಕು ಅನ್ನುವ ತಾತ್ವಿಕ ಸಿದ್ದಾಂತ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ವಿದಿತವಾದ ಮಾತು.
ಶಿವರಾಜ್ ಕುಮಾರ್, ಉಪೇಂದ್ರ ಜೋಡಿಯಾಗಿ ಅಭಿನಯಿಸುತ್ತಿರುವ ಮೂರನೇ ಚಿತ್ರ ಲವ ಕುಶವನ್ನು ಪ್ರಭಾಕರ್ ನಿರ್ಮಿಸಿದ್ದಾರೆ.
ಚಿತ್ರದ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಸಿಂಗಾಪುರ್ ಮತ್ತು ಮಲೇಷಿಯಾಕ್ಕೆ ತೆರಳಲು ಭರದ ಸಿದ್ದತೆ ನಡೆದಿದೆ. ಹಾಡುಗಳು ಶ್ರೀಮಂತವಾಗಿರಬೇಕೆನ್ನುವ ಏಕೈಕ ಉದ್ದೇಶದಿಂದ ಈ ಹಾಡುಗಳನ್ನು ವಿದೇಶದಲ್ಲಿ ನಿರ್ಮಿಸಲಾಗುತ್ತಿದೆಯಂತೆ.
ತೆಲುಗು, ತಮಿಳು ಮತ್ತು ಮಲೆಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಚಾರ್ಮಿ ಈ ಚಿತ್ರದಲ್ಲಿ ಉಪೇಂದ್ರ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಇನ್ನು ಜೆನ್ನಿಫರ್ ಕೊತ್ವಾಲ್ ಶಿವಣ್ಣನ ಜೊತೆ. ಗುರುಕಿರಣ್ ಸಂಗೀತ ಚಿತ್ರಕ್ಕಿದೆ.