ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯಶಸ್ವಿನ ಅಲೆಯಲ್ಲಿ ನಿನದೇ ನೆನಪು
ಸುದ್ದಿ/ಗಾಸಿಪ್
Feedback Print Bookmark and Share
 
ಮದನ್ ಪಟೇಲ್ ಅಂತೂ ಖುಷಿಯಾಗಿದ್ದಾರೆ. ಅವರ ಬಹು ದಿನದ ಕನಸು ತಮ್ಮ ಮಗ ಮಯೂರ್ ಪಟೇಲ್‌ರನ್ನು ಸ್ಟಾರ್ ಮಾಡಿ ಕೂಡಿಸುವ ಆಸೆ ಕೊನೆಗೂ ಕೈಗೂಡಿದೆ.

ಅವರೇ ನಿರೀಕ್ಷಿಸದ ರೀತಿಯಲ್ಲಿ ನಿನದೇ ನೆನಪು ಚಿತ್ರ ಯಶ ಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಹಣ ಸೂರೆಮಾಡುತ್ತಿದೆ. ಮಗ ಮಯೂರ್ ಪಟೇಲ್ ಅಭಿನಯ ಪ್ರೌಢಿಮೆಯಿಂದ ಕೂಡಿದೆ ಎಂದು ತಾವೇ ಬೆನ್ನು ತಟ್ಟಿಕೊಳ್ಳುತ್ತಾರೆ.

ಹೌದು ನಿನದೇ ನೆನಪು ಚಿತ್ರದ ಕ್ಲೈಮಾಕ್ಸ್ ನೋಡಿದ ಮೇಲಂತೂ ಈ ಮಾತು ದಿಟವೆನಿಸದೇ ಇರದು. ಚಿತ್ರಕ್ಕೆ ಬಂದ ಅಭೂತಪೂರ್ವ ಪ್ರತಿಕ್ರಿಯೆಗಳ ಬಗ್ಗೆ ಮಾತಾಡುತ್ತಾ ಮಯೂರ್ ಭಾವುಕರಾಗಿ ಈ ದಿನಕ್ಕಾಗಿ ಇಷ್ಟು ದಿನ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾದಿದ್ದೆ ಎನ್ನುತ್ತಾರೆ.

ಅಪ್ಪ, ಮಗ ಇಬ್ಬರಿಗೂ ಏಕದಂ ಸ್ಟಾರ್ ವ್ಯಾಲ್ಯೂ ಸಿಕ್ಕಿರುವುದನ್ನ ಕಂಡು ಗಾಂಧೀನಗರದ ಜನ ಬೆರಗಾಗಿ ಹೋಗಿದ್ದಾರಂತೆ. ಚಿತ್ರದಲ್ಲಿ ಮಾಯಾ ಪಾತ್ರ ಇನ್ನಷ್ಟು ಪಕ್ವವಾಗಬೇಕಿತ್ತು ಎನ್ನುವ ತಾಖೀತು ಬಿಟ್ಟರೆ ಉಳಿದಂತೆ ಎಲ್ಲವೂ ಇಲ್ಲಿ ಪ್ಲಸ್ ಪಾಯಿಂಟ್.