ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಮೂಲ್ಯ ಅಭಿನಯ: ಮಹಿಳಾ ಆಯೋಗದ ನೋಟಿಸ್
ಸುದ್ದಿ/ಗಾಸಿಪ್
Feedback Print Bookmark and Share
 
ಮುಂಗಾರುಮಳೆ ಮೂಲಕ ಅಗ್ರಗಣ್ಯ ನಾಯಕರಾಗಿರುವ ಗಣೇಶ್ ನಾಯಕನಾಗಿರುವ ಚೆಲುವಿನ ಚಿತ್ತಾರದಲ್ಲಿ ನಾಯಕಿ ಅಪ್ರಾಪ್ತ ವಯಸ್ಸಿನ ಅಮೂಲ್ಯನನ್ನು ಕಾನೂನು ಬಾಹಿರವಾಗಿ ಅಭಿನಯಕ್ಕೆ ತರಲಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ದೂರಿನನ್ವಯ ರಾಜ್ಯ ಮಹಿಳಾ ಆಯೋಗ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ನೋಟಿಸ್ ಜಾರಿಮಾಡಿದೆ.

ಈ ಶಾಲಾ ಬಾಲಕಿಯನ್ನು ಚಿತ್ರದಲ್ಲಿ ನಾಯಕ ನಟನೊಂದಿಗೆ ಪ್ರಣಯ, ಸರಸ, ಸಲ್ಲಾಪದಲ್ಲಿ ನಟಿಸಲು ಪ್ರೇರೇಪಣೆ ನೀಡಲಾಗಿದೆ ಮತ್ತು ಅಂತಹ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ಇದರಿಂದ ಯುವಜನಾಂಗದ ಮೇಲೆ ಪರಿಣಾಮ ಬೀರಿ ಸಮಾಜದಲ್ಲಿ ಇಲ್ಲದ ಸಮಸ್ಯೆಗಳು ಸೃಷ್ಟಿಯಾಗುತ್ತವೆ.
ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಅರ್ಜಿ ಸಲ್ಲಿಸಿರುವ ವ್ಯಕ್ತಿಯ ಹೆಸರನ್ನು ಭದ್ರತೆಯ ದೃಷ್ಟಿಯಿಂದ ಹೇಳಲಾಗದು ಎಂದು ಆಯೊಗದ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ತಿಳಿಸಿದ್ದಾರೆ.

ಈ ಅರ್ಜಿಯ ಹಿನ್ನಲೆ ಯಲ್ಲಿ ವಿವರಣೆ ನೀಡುವಂತೆ ನಿರ್ದೇಶಕ ಎಸ್. ನಾರಾಯಣ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಈ ಚಿತ್ರಕ್ಕೆ ಸರ್ಟಿಫಿಕೆಟ್ ನೀಡಿರುವ ಸೆನ್ಸಾರ್ಮಂಡಳಿಗೆ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೋಟಿಸ್ ಜಾರಿಯಾಗಿದೆ. ಇದಕ್ಕೆ ವಿವರಣೆ ಬಂದನಂತರ ತಾವು ಕ್ರಮ ಕೈಗೊಳ್ಳವುದಾಗಿ ನೇಸರ್ಗಿ ತಿಳಿಸಿದ್ದಾರೆ.