ಸತ್ಯ ಇನ್ ಲವ್
ಬೆಂಗಳೂರು, ಸೋಮವಾರ, 15 ಅಕ್ಟೋಬರ್ 2007( 17:27 IST )
ಬೆಂಗಳೂರಿನಲ್ಲಿ ಶಿವರಾಜಕುಮಾರ್ ಅಭಿನಯದ"ಸತ್ಯ ಇನ್ ಲವ್" ಚಿತ್ರದ ಮೂರನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಮುಗಿದಿದೆ.
ಅಪಾರ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು ತೆಲುಗು ಚಿತ್ರರಂಗದ ಜೆನಿಲಿಯ ಚಿತ್ರದ ನಾಯಕಿ ಸತ್ಯ ಇನ್ ಲವ್ ನಟಿಸುತ್ತಿದ್ದು ಈ ಚಿತ್ರದಲ್ಲಿ ಶಿವರಾಜಕುಮಾರ್‌ಗೆ ವಿಶೇಷ ಗೆಟಪ್ ನೀಡಲಾಗಿದೆ.
ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಯಂಗ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಹೈಲೆಟ್ ಎಂದು ನಿರ್ದೇಶಕ ರಾಘವಲೋಕಿ ಅಭಿಪ್ರಾಯ ಪಟ್ಟಿದ್ದಾರೆ
ಹಾಂಡೋದರದಲ್ಲಿ ಪಂಜಾಬಿ ಗಾಯಕ ದಲೇರ್ ಮೆಹಂದಿ ನಟಿಸಿದ್ದಾರೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ.
ನವೆಂಬರ್ ನಲ್ಲಿ ಕೊನೆಯ ಹಂತದ ಚಿತ್ರೀಕರಣ ಪಾರಂಭವಾಗುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ದಸರಾ ಹಬ್ಬಕ್ಕೆ ಚಿತ್ರದ ಧ್ವನಿಸುರಳಿಯನ್ನು ಬಿಡುಗಡೆ ಮಾಡಲಾಗುತ್ತದೆ.