ಕಲಾವಿದರಿಗೊಂದು ನಿರಾಶಾಧಾಮ
ಬೆಂಗಳೂರು, ಬುಧವಾರ, 17 ಅಕ್ಟೋಬರ್ 2007( 15:02 IST )
ದುನಿಯಾ ವಿಜಯ್ ಸಮಾಜ ಸೇವೆಯ ಮನಸ್ಸು ಮಾಡಿದ್ದಾರೆ. ಅಲ್ಲೊಬ್ಬ ಇಲ್ಲೊಬ್ಬ ಕಲಾವಿದರಿಂದ ಉದರ ಪೋಷಣೆಯ ಜೊತೆಗೆ ಕಲಾಪೋಷಣೆಯ ಕಾರ್ಯಗಳೂ ನಡೆಯುತ್ತಿರುತ್ತವೆ.
ನೊಂದವರ ಪಾಲಿನ ಸಂಜೀವಿನಿಯಾಗ ಬಯಸುವ ಪ್ರಯತ್ನಗಳೂ ನಡೆಯುತ್ತಿರುತ್ತವೆ. ಪತ್ರಿಕೆಗಳಲ್ಲಿ ಕನ್ನಡ ಚಿತ್ರರಂಗ ಕಲಾವಿದರ ದುರಂತ ಕಥೆಗಳ ಕಥನ ಓದುತ್ತಾ ಬೇಸರಗೊಂಡ ನವ ನಟ ವಿಜಯ್ ಇದೀಗ ಈ ನಿರಾಶ್ರಿತರಿಗಾಗೆಂದೇ ನಿರಾಶಾಧಾಮವೊಂದನ್ನು ಕಟ್ಟಿ ಅವರ ಬಾಳಿಗೆ ಆಶ್ರಯಧಾಮ ಮಾಡಬೇಕೆನ್ನುವ ಕನಸು ಹೊತ್ತಿದ್ದಾನೆ.
ನಾನು ಕಷ್ಟದಿಂದಲೇ ಈ ಮಟ್ಟಿಗೆ ಮುಂದೆ ಬಂದಿದ್ದೇನೆ. ಚಿತ್ರರಂಗದಲ್ಲಿ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಅನೇಕ ಕಲಾವಿದರಿದ್ದಾರೆ. ಅವರಿಗೆ ಸಹಾಯ ಆಗಲೆಂದೇ ಈ ಆಶ್ರಮ ಕಟ್ಟಲು ಯೋಜಿಸಿದ್ದೇನೆ ಎಂದು ಹೇಳುವ ವಿಜಯ್ ಇದರ ಉಸ್ತುವಾರಿಯನ್ನು ಪತ್ರಕರ್ತ ಗಣೇಶ್ ಕಾಸರಗೋಡಿಗೆ ಕೊಟ್ಟಿದ್ದಾರಂತೆ. ದುನಿಯಾ ವಿಜಯವರ ಈ ವಿಚಾರಗಾಥೆ ಯಶೋಗಾಥೆಯಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.