ಚಿರಂಜೀವಿ ಮಗಳ ಸಿನಿಮಯ ಮದುವೆ
ಹೈದ್ರಾಬಾದ್, ಗುರುವಾರ, 18 ಅಕ್ಟೋಬರ್ 2007( 15:17 IST )
ಆಂಧ್ರಪ್ರದೇಶದಾದ್ಯಂತ ತಮ್ಮ ಅಧ್ಬುತ ನಟನೆಯಿಂದ ಸೂಪರ್ ಸ್ಟಾರ್ ಪಟ್ಟ ಪಡೆದ ಚಿರಂಜೀವಿಯ ಮಗಳು ಶ್ರೀಜಾ ತನ್ನ ಸ್ನೇಹಿತ ಶಿರಿಶ್ ಭಾರಧ್ವಜ್ ಅವರನ್ನು ನಗರದ ಆರ್ಯ ಸಮಾಜದ ಮಂದಿರದಲ್ಲಿ ಮದುವೆಯಾಗಿದ್ದಾರೆ.
ನಮ್ಮ ಪ್ರೇಮಕ್ಕೆ ತಂದೆ ತಾಯಿಗಳ ವಿರೋಧ ವ್ಯಕ್ತಪಡಿಸಿದರಲ್ಲದೇ ಒಂದು ವರ್ಷಗಳ ಕಾಲ ಮನೆಯಲ್ಲಿ ಕೂಡಿಹಾಕಿದ್ದರು ಎಂದು ಶ್ರೀಜಾ ಆರೋಪಿಸಿದ್ದಾರೆ.
ಆದ್ದರಿಂದ ತಂದೆ ತಾಯಿಗಳ ಗೈರುಹಾಜರಿಯಲ್ಲಿ ಮದುವೆಯಾಗಿದ್ದೇವೆ ಎಂದು ಸ್ಪಷ್ಟಿಕರಣ ನೀಡಿದ್ದಾಳೆ.
ತಂದೆ ತಾಯಿಗಳ ಒಪ್ಪಿಗೆಯಿಲ್ಲದೇ ಮದುವೆಯಾಗಿದ್ದರಿಂದ ಅವರಿಂದ ಬೆದರಿಕೆ ಕರೆಗಳು ಬರುವ ಸಾಧ್ಯತೆಗಳಿವೆ. ರಾಜ್ಯದ ಪೊಲೀಸ್ ಹಾಗೂ ಮಾಧ್ಯಮಗಳು ನಮಗೆ ಬೆಂಬಲ ನೀಡಬೇಕೆಂದು ನೂತನ ದಂಪತಿಗಳು ಮನವಿ ಮಾಡಿದ್ದಾರೆ.