ತಾರಾ ಈಗ ನಿರ್ಮಾಪಕಿ
ಬೆಂಗಳೂರು, ಗುರುವಾರ, 18 ಅಕ್ಟೋಬರ್ 2007( 18:02 IST )
ತಾರಾ ಈಗ ನಿರ್ಮಾಪಕಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅವಕಾಶ ಕಡಿಮೆಯಾಗಿ ಅವರು ನಿರ್ಮಾಣ ಕಾರ್ಯಕ್ಕೆ ಇಳಿದಿಲ್ಲ . ಸದಭಿರುಚಿ ಚಿತ್ರಗಳನ್ನು ನಿರ್ಮಿಸುವ ಉದ್ದೇಶದಿಂದ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ .
ಈ ಚಿತ್ರ ಪ್ರಶಸ್ತಿ ಗಳಿಸುವ ಕಲಾತ್ಮಕ ಚಿತ್ರವಲ್ಲ. ಪ್ರಶಸ್ತಿ ಮತ್ತು ಹಣಗಳಿಸುವ ಕಮರ್ಷಿಯಲ್ ಚಿತ್ರ. ಆದರೆ ಹೀರೋ ಯಾರೆಂಬ ಗುಟ್ಟನ್ನು ಇನ್ನೂ ಬಿಟ್ಟಿಲ್ಲ.
ತಾರಾ ಹೇಳುವಂತೆ ಈ ಹೊತ್ತಿಗೆ ಚಿತ್ರ ಸೆಟ್ಟೇರಬೇಕಿತ್ತು.ಆದರೆ ನಾಯಕನ ಡೇಟ್ ಸಮಸ್ಯೆ ಯಿಂದಾಗಿ ಚಿತ್ರಸೆಟ್ಟೇರುವುದು ತಡವಾಗುತ್ತಿದೆ ಎನ್ನುತ್ತಿದ್ದಾರೆ.
ಚಿತ್ರಕ್ಕೆ ತಾರಾ ಮತ್ತು ಪತಿ ವೇಣು ಕಥೆ ಬರೆದಿದ್ದಾರೆ. ಈಗಾಗಲೇ ಚಿತ್ರಕಥೆಯೂ ರೆಡಿಯಾಗಿದೆ.ಯುಗಾದಿ ವೇಳೆಗೆ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.
ತಾರಾ ಈಗ ಅರಮನೆ, ಗಂಗಾ,ಕಾವೇರಿ,ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.ಪತಿ ಕೆಲಸ ಮಾಡುವ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದ ತಾರಾ ಈ ಎರಡೂ ಚಿತ್ರಗಳಲ್ಲಿ ಪತಿ ಜೊತೆ ಕೆಲಸ ಮಾಡುತ್ತಿದ್ದಾರೆ.