ವಾರಸ್ದಾರ ಹಾಡಿಗಾಗಿ ಕುಣಿತ
ಬೆಂಗಳೂರು, ಗುರುವಾರ, 18 ಅಕ್ಟೋಬರ್ 2007( 18:04 IST )
ಕೆಂಗೇರಿ ಬಳಿ ಇರುವ ಜೆ.ಬಿ.ಎಸ್ ಎಂಜಿನಿಯರ್ ಕಾಲೇಜ್ ನಲ್ಲಿ ಹಾಡಿಗಾಗಿ ಕುಣಿತ ನಡೆಯುತ್ತಿತ್ತು. ಗುರುದೇಶಪಾಂಡೆ ನಿರ್ದೇಶನದ "ವಾರಸ್ದಾರ" ಚಿತ್ರಕ್ಕಾಗಿ ಹಾಡುಗಳನು ಚಿತ್ರೀಕರಿಸಲಾಯಿತು.
ಕಾಲೇಜ್ ನಲ್ಲಿ ನಾಯಕ ಪರಿಚವಾಗುವ ಹಾಡನ್ನು ಚಿತ್ರಿಸಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ನಾಯಕನಾಗಿ ಸಂದೀಪ್ ಹಾಗೂ 40ಜನ ನೃತ್ಯ ಕಲಾವಿದರು ಈಹಾಡಿನಲ್ಲಿ ಭಾಗವಹಿಸಿದ್ದರು.
ಇನ್ನೂ ಎರಡುಹಾಡುಗಳ ಚಿತ್ರೀಕರಣ ಬಾಕಿ ಇದ್ದು ಇದೇತಿಂಗಳ 10ರಂದು ಬಾದಾಮಿ ಪಟ್ಟದ ಕಲ್ಲು. ಐಹೊಳೆಯಲ್ಲಿ ಚಿತ್ರೀಕರಣ ನಡೆಸಲಾಗುವುದು, ಡ್ಯುಯೆಟ್ ಹಾಡನ್ನು ಬೆಳಗಾವಿಯಲ್ಲಿ ಚಿತ್ರೀಕರಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪ್ರಾರಂಭ ವಾದ ಚಿತ್ರೀಕರಣ ಬೆಳಗಾವಿಯಲ್ಲಿ ಮುಗಿಯಲಿದೆ. ರಾಜೇಶ್ ರಾಮನಾಥ್ ಸಂಗೀತ ಸಂಯೋಜಿಸಿದ್ದಾರೆ. ಜಯಂತಕಾಯ್ಕಿಣಿ, ಕವಿರಾಜ್ ಗೀತೆ ಬರೆದಿದ್ದಾರೆ.
ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶಿಸಿದ್ದಾರೆ.ಮುಖ್ಯಪಾತ್ರದಲ್ಲಿ ರವಿಬೆಳಗೆರೆ ಕಾಣಸಿಕೊಂಡಿದ್ದಾರೆ. ಗಂಡ ಹೆಂಡತಿ ಖ್ಯಾತಿಯ ಸಂಜನಾ ಈ ಚಿತ್ರದ ಹಾಡೊಂದರಲ್ಲಿ ಕುಣಿದಿದ್ದಾರೆ. ಅಶ್ವಿನಿ ಎರಡನೇ ನಾಯಕಿಯಾಗಿ ನಟಿಸಿದ್ದಾರೆ.