ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರ್ದೆಶಕ ಪ್ರೇಮ್ ಹುಟ್ಟು ಹಬ್ಬ
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡದ ಯಶಸ್ವಿ ಚಿತ್ರಗಳಾದ , ಕರಿಯ, ಜೋಗಿ ಇನ್ನು ತೆರೆ ಕಾಣದ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ ಕನ್ನಡದ ಖ್ಯಾತಿವೆತ್ತ ನಿರ್ದೇಶಕನಾಗಿರುವ ಪ್ರೇಮ್ ತಮ್ಮ ಹುಟ್ಟು ಹಬ್ಬವನ್ನು ಪತ್ನಿ ರಕ್ಷಿತಾ ಹಾಗೂ ಅಭಿಮಾನಿ ಬಳಗದೊಂದಿಗೆ ಕೇಕ್ ಕತ್ತರಿಸುವುದರ ಮೂಲಕ ಸಂತಸ ಹಂಚಿಕೊಂಡು ಬಹಳ ಸಡಗರ-ಸಂಭ್ರಮದಿಂದ ಆಚರಿಸಿಕೊಂಡರು.

ಮದುವೆಯಾದ ನಂತರ ಮೊದಲ ಬಾರಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಪ್ರೇಮ್ ದಂಪತಿಗಳಿಗೆ ಮರೆಯಲಾಗದ ಸುದಿನವಾಗಿತ್ತು.

ಪ್ರೇಮ್‌ಗೆ ಇದು ಅಚ್ಚರಿ ತಂದರೆ ಪತ್ನಿ ರಕ್ಷಿತಾಳ ಕಣ್ಣಲ್ಲಿ ಹೊಸ ಹೊಳಪನ್ನು ಮೂಡಿಸಿತು. ಮುಗೀಬೀಳುವ ಅಭಿಮಾನಿಗಳ ನಡುವೆ ಕತ್ತರಿಸಿದ ಕೇಕನ್ನು ಪತ್ನಿಯ ಬಾಯಿಗಿಟ್ಟ ಪ್ರೇಮ್ ಮುಖದಲ್ಲಿ ಸಂತಸದ ಕಳೆ ಮಿಂಚುತ್ತಿತ್ತು.

ತುಂಬಿದ ಅಭಿಮಾನಿಗಳ ನಡುವೆ ಕತ್ತರಿಸಿದ ಕೇಕನ್ನು ಪತ್ನಿಯ ಬಾಯಿಗಿಟ್ಟ ಪ್ರೇಮ್ ಮುಖದಲ್ಲಿ ಸಂತಸದ ಕಳೆ ಮಿಂಚುತ್ತಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ಪ್ರೇಮ್‌ಗೆ ಶುಭಹಾರೈಸಿದರು.