ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶ್ರೀಮುತ್ತು"ವಿನಲ್ಲಿ ಶಿವರಾಜ್ ಕುಮಾರ್
ಸುದ್ದಿ/ಗಾಸಿಪ್
Feedback Print Bookmark and Share
 
ಶಿವರಾಜ್ ಕುಮಾರ್ ಮನೆ ಕಟ್ಟಿದ್ದಾರೆ. ರಾಜ್ ಫ್ಯಾಮಿಲಿಯಲ್ಲಿ ಮೊದಲ ಬಾರಿಗೆ ಮನೆ ಕಟ್ಟಿದ ಹೆಮ್ಮೆ ಶಿವರಾಜ್ ಕುಮಾರ್ ಗೆ ಸಲ್ಲುತ್ತದೆ. ಈ ವರೆಗೆ ಅವರು ಸದಾಶಿವನಗರದ ಸ್ವಂತ ಮನೆಯಲ್ಲೇ ವಾಸವಾಗಿದ್ದರು.

ಈಗ ಹೆಬ್ಬಾಳ ಬಳಿ ಹೂಸಮನೆ ಕಟ್ಟಿದ್ದಾರೆ. ಆ ಮನೆಗೆ "ಶ್ರೀಮುತ್ತು" ಎಂದು ಹೆಸರು. ಈ ಮನೆ ಕಟ್ಟುವ ಹಂತದಲ್ಲಿದ್ದಾಗ ರಾಜ್ ಕುಮಾರ್ ಈ ಮನೆಗೆ ಬಂದು ಹೋಗಿದ್ದರಂತೆ. "ವಿಶಾಲವಾಗಿ ಮನೆ ಕಟ್ಟುತ್ತಿದ್ದೀಯಾ ಸಂತೋಷವಾಗುತ್ತಿದೆ"ಎಂದು ಹೇಳಿದ್ದರಂತೆ.

ಅಪ್ಪಾಜಿ ಮನೆ ಕಟ್ಟುವ ಸಂದರ್ಭದಲ್ಲೇ ನನಗೆ ಮತ್ತು ಮನೆಗೆ ಆಶೀರ್ವಾದಮಾಡಿದ್ದಾರೆ. ನಾನು ಕಟ್ಟಿದ ಮನೆಗೆ ಅಪ್ಪಾಜಿ ಬಂದು ಹೋದ ಖುಷಿ ನನಗಿದೆ"ಎನ್ನುತ್ತಾರೆ ಶಿವಣ್ಣ ಕಳೆದ ವಾರವಷ್ಟೇ ಮನೆಯ ಗೃಹ ಪ್ರವೇಶ ನಡೆಸಿದ್ದಾರೆ.

"ಅಪ್ಪಾಜಿ ಇಲ್ಲದೆ ನಮ್ಮ ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯುತ್ತಿವೆ. ಗೃಹ ಪ್ರವೇಶದ ದಿನ ಅಪ್ಪಾಜಿ ಇದಿದ್ದರೆ ಅವರು ಖುಷಿಪಡುತ್ತಿದ್ದರು. ಆದರೆ ಅವರು ಇಲ್ಲ ಎಂದು ನಾನು ಹೇಳುವುದಿಲ್ಲ. ಅವರು ಸದಾ ನಮ್ಮೊಂದಿಗಿದ್ದಾರೆ. ಪ್ರತಿಕ್ಷಣ ನೆನಪಾಗುತ್ತಾರೆ. ಖುಷಿ ಅನುಭವಿಸುವ ಪ್ರತಿ ಸಂದರ್ಭದಲ್ಲೂ ಅವರು ಮತ್ತೆ ಮತ್ತೆ ನೆನಪಾಗುತ್ತಾರೆ ಎಂದರು.