ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » `ಬುದ್ದಿವಂತನಾದ ಉಪೇಂದ್ರ !
ಸುದ್ದಿ/ಗಾಸಿಪ್
Feedback Print Bookmark and Share
 
ಬಾಲಿವುಡ್ ನಾಯಕ ನಟರು ತೆರೆಮೇಲೆ ತಮ್ಮ ಕಟ್ಟುಮಸ್ತಾದ ಮೈ ತೋರಿಸುವುದರಲ್ಲಿ ಮುಂದಿರೋದು ಎಲ್ಲರಿಗೂ ತಿಳಿದಿರುವ ಸತ್ಯ. ಸಲ್ಮಾನ್‌ಖಾನ್, ಹೃತಿಕ್‌ ರೋಷನ್, ಅಕ್ಷಯ ಕುಮಾರ್ ಇತ್ತೀಚೆಗೆ ಶಾರುಖಾನ್ ಕೂಡಾ `ಮೈ ತೋರಿಸಿ ಮರುಳು ಮಾಡುತ್ತಿರೋದು ಸಧ್ಯಕ್ಕೆ ಬಾಲಿವುಡ್ ತಾಜಾ ಇಶ್ಯೂ.

ಹೀಗೆ ಬಾಲಿವುಡ್ ಗಾಳಿ ನಮ್ಮ ಗಾಂಧಿನಗರಕ್ಕೂ ವ್ಯಾಪಿಸಿರೋದು ಇಲ್ಲಿ ವಿಶೇಷ.

ಕನ್ನಡ ಚಿತ್ರರಂಗದಲ್ಲಿ ನಾಯಕ ನಟರು ಮೈ ತೋರಿಸುವ ಸಂಪ್ರದಾಯಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿಲ್ಲದಿರೋದು ಮಾತ್ರ ನಿಜಕ್ಕೂ ದುರ್ದೈವ ಅನ್ನೋದು ಗಾಂಧಿನಗರದ ಸಿನಿಮಾ ಪಂಡಿತರ ಗೊಣಗು.

ಇತ್ತೀಚಿಗೆ ನಟ ಉಪೇಂದ್ರ ತಮ್ಮದೇ ನಿರ್ದೇಶನದ `ಉಪೇಂದ್ರ ಚಿತ್ರದಲ್ಲಿ ಬಟ್ಟೆ ತೆಗೆದು ಅಭಿನಯಿಸಿದ್ದರು. ಆದರೆ ಅದೇನು ಹೆಚ್ಚ್ಚು ಸುದ್ದಿಯಾಗಲಿಲ್ಲ.

ಇದೀಗ ಅದೇ ಉಪೇಂದ್ರ ತಮ್ಮ `ಬಿಚ್ಚಾಟ ಮುಂದುವರೆಸಿದ್ದಾರೆ. `ಬುದ್ದಿವಂತ ಅನ್ನೋ ಚಿತ್ರದಲ್ಲಿ ತಮ್ಮ ಮೈ ಹುರಿ ಮಾಡಿಕೊಂಡು ತೆರೆದೆದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಉಪ್ಪಿ.

ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ನಿರ್ಮಿಸುತ್ತಿರುವ `ಬುದ್ದಿವಂತ ಚಿತ್ರದ ಉಪ ಶೀರ್ಷಿಕೆ ಏನು ಗೊತ್ತೇ? `ಕಡ್ಡಾಯವಾಗಿ ಹೆಣ್ಣು ಮಕ್ಕಳಿಗೆ ಮಾತ್ರ

ಈ ಹಿಂದೆ ತಮ್ಮ `ಎ ಚಿತ್ರದಲ್ಲಿ `ಬುದ್ದಿವಂತರಿಗೆ ಮಾತ್ರ ಎಂಬ ಉಪಶೀರ್ಷಿಕೆಯಿಂದ ಗಿಮಿಕ್ ಮಾಡಿದ್ದ ಉಪ್ಪಿ ಇದೀಗ `ಬುದ್ದಿವಂತ ಚಿತ್ರದಲ್ಲಿ `ಕಡ್ಡಾಯವಾಗಿ ಹೆಣ್ಣು ಮಕ್ಕಳಿಗೆ ಮಾತ್ರ ಅನ್ನೋ ಉಪ ಶೀರ್ಷಿಕೆ ಸೇರಿಸಿದ್ದಾರೆ! ಕನ್ನಡ ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೋ ಅನ್ನೋದನ್ನ ಕಾದು ನೋಡಬೇಕು.