ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪುನೀತ್ ಭರ್ಜರಿ `ಮಿಲನ
ಸುದ್ದಿ/ಗಾಸಿಪ್
Feedback Print Bookmark and Share
 
ಪ್ರಕಾಶ್ ನಿರ್ದೇಶನದ `ಮಿಲನ ರಾಜ್ಯಾದ್ಯಂತ ಭರ್ಜರಿಯಾಗಿ ಓಡುತ್ತಿದೆ. 37 ಕೇಂದ್ರಗಳಲ್ಲಿ ಅರ್ಧಶತಕ ಬಾರಿಸಿರುವ `ಮಿಲನ ಒಳ್ಳೆಯ ಗಳಿಕೆ ದಾಖಲಿಸುತ್ತಿದೆ.

ಈ ಸಂತೋಷ ಹಂಚಿಕೊಳ್ಳುವುದಕ್ಕೆ ಮೊನ್ನೆ ಪತ್ರಕರ್ತರೊಂದಿಗೆ `ಮಿಲನ ಕೂಟ ಹಮ್ಮಿಕೊಂಡಿದ್ದರು ನಿರ್ದೇಶಕ ಪ್ರಕಾಶ್. `ರಿಷಿ ಮತ್ತು `ಶ್ರೀ ಚಿತ್ರಗಳ ನಂತರ ಅಪರೂಪಕ್ಕೆ ಸಿಕ್ಕಿದ ಈ ಗೆಲುವು ಪ್ರಕಾಶ್ ಆತ್ಮವಿಶ್ವಾಸವನ್ನು ಸಹಜವಾಗಿಯೇ ಇಮ್ಮಡಿಸಿತ್ತು.

ಮುಖ್ಯವಾಗಿ `ಮಿಲನ ಚಿತ್ರದ ಪ್ಲಸ್ ಪಾಯಿಂಟ್ `ನಿನ್ನಿಂದಲೇ.. ನಿನ್ನಿಂದಲೇ.. ಕನಸೊಂದು ಶುರುವಾಗಿದೆ.. ಎಂಬ ಜಯಂತ್ ಕಾಯ್ಕಣಿ ಬರೆದ ಹಾಡು. ಇದನ್ನು ಪ್ರಕಾಶ್ ಹೇಳಿಕೊಂಡರು ಕೂಡ.

ಪತ್ರಿಕಾಗೋಷ್ಠಿಯಿಡೀ ಚಿತ್ರದ ನಿರ್ಮಾಪಕ ದುಷ್ಯಂತ್ರನ್ನು ಚಿತ್ರ ತಂಡ ಹಾಡಿಹೊಗಳಿದ್ದು ವಿಶೇಷ. `ಮಿಲನದ ಭರ್ಜರಿ ಗೆಲುವಿನಿಂದ ಪ್ರೇರಿತರಾಗಿರುವ ದುಷ್ಯಂತ್ ಮುಂದಿನ ವರ್ಷ ಕನಿಷ್ಠ ನಾಲ್ಕು ಚಿತ್ರ ಮಾಡಲು ನಿರ್ಧರಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ಅವರ ಮುಂದಿನ ಚಿತ್ರ `ಮತ್ತುರಾಜ್. ಶಿವರಾಜ್ ಕುಮಾರ್ ಚಿತ್ರದ ನಾಯಕ. ಆ ಚಿತ್ರಕ್ಕೂ ಪ್ರಕಾಶ್ ಅವರೇ ನಿರ್ದೇಶಕರ ಅನ್ನೋ ಗುಟ್ಟನ್ನ ಮಾತ್ರ ಅವರು ಬಿಟ್ಟುಕೊಡಲಿಲ್ಲ.

ಅಂದಹಾಗೆ ಪುನೀತ್ ಅವರ ಮುಂದಿನ ಚಿತ್ರವನ್ನೂ ಪ್ರಕಾಶ್ ಅವರೇ ನಿರ್ದೇಶಿಸಲಿದ್ದಾರಂತೆ. ವಜ್ರೇಶ್ವರಿ ಕಂಬೈನ್ಸ್ ಈ ಚಿತ್ರ ನಿರ್ಮಿಸಲಿದೆ.