ಶುರುವಾಯ್ತು ಹೈಸ್ಕೂಲು..
ಬೆಂಗಳೂರು, ಮಂಗಳವಾರ, 13 ನವೆಂಬರ್ 2007( 19:14 IST )
ಲವ್ ಸ್ಟೋರಿ ವಿಭಾಗಕ್ಕೆ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದೆ.ನಾಯಕ-ನಾಯಕಿಯರು ಕಾಲೇಜಿನಲ್ಲಿ ಲವ್ ಮಾಡೋದು ಈಗ ಹಳೆಯ ಪದ್ಧತಿ. ಹೈಸ್ಕೂಲಿನಲ್ಲಿಯೇ `ಲವ್ ಮಾಡೋದು, ಮರ ಸುತ್ತೋದು ಹೊಸಾ ಪದ್ಧತಿ!
ಅಂದಹಾಗೆ ಗಾಂಧಿನಗರದಲ್ಲಿ ಇಂತಹದೊಂದು ಪರಿಪಾಠಕ್ಕೆ `ನಾಂದಿ ಹಾಡಿರೋದು ನವ ನಿರ್ದೇಶಕ ಎಚ್.ರವಿ. ಎಸ್.ನಾರಾಯಣ್ ನಿರ್ದೇಶನದ ರಿಮೇಕ್ ಚಿತ್ರ `ಚೆಲುವಿನ ಚಿತ್ತಾರದಲ್ಲೂ ಇಂತದ್ದೇ ಹೆಸ್ಕೂಲ್ ಲವ್ ಕಥೆಯಿದೆ. ಬಹುಶಃ ಈ ಚಿತ್ರದಿಂದ ಪ್ರೇರಣೆಗೊಳಗಾದಂತಿರುವ ರವಿ `ಹೈಸ್ಕೂಲ್ ಎಂಬ ಚಿತ್ರ ನಿರ್ದೇಶಿಸುತ್ತಿದ್ದಾರೆ.
ರಾಜ್ ಕಿಶೋರ್, ಪಿ.ಎನ್.ಸತ್ಯ ಮತ್ತಿತರರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರವಿ ಇದೀಗ ತಾವೇ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ತಮ್ಮ ಮಹಾತ್ವ್ವಾಕಾಂಕ್ಷೆಯ ಮೊದಲ ಚಿತ್ರಕ್ಕೆ ಅವರಿಟ್ಟ ಹೆಸರು `ಹೈಸ್ಕೂಲು!
ಮೊನ್ನೆ ಮೊನ್ನೆ ಕಾಲೇಜು, ಈಗ ಹೈಸ್ಕೂಲು..ಮುಂದೆ `ಪ್ರೈಮರಿ ಅಂತಲೂ ಹೆಸರುಳ್ಳ ಚಿತ್ರಗಳೂ ಬರಬಹುದು ಅನ್ನೋ ಗಾಂಧಿನಗರದ ಸಿನಿಮಾ ಪಂಡಿತರ ಗೊಣಗು ಖಂಡಿತಾ ತಪ್ಪಲ್ಲಾ ಬಿಡಿ!!