ಶಿವಣ್ಣಂಗೆ ಲಾಂಗ್ ಅನಿವಾರ್ಯವಾ?
ಬೆಂಗಳೂರು, ಬುಧವಾರ, 14 ನವೆಂಬರ್ 2007( 20:24 IST )
ಶಿವಣ್ಣ ಲಾಂಗ್ ಹಿಡಿದು ಅಭಿನಯಿಸಿದ ಚಿತ್ರಕ್ಕೆ ಬಂಡವಾಳ ಹಾಕಿದ್ರೆ ಲಾಭ ಗ್ಯಾರಂಟಿ ಇದು ಗಾಂಧಿನಗರದ ಬಹುತೇಕ ನಿರ್ಮಾಪಕರ ನಂಬಿಕೆಯಂತೆ.
ನಿರ್ಮಾಪಕರ ಈ ನಂಬಿಕೆಗೆ ಪುಷ್ಠಿ ನೀಡುವಂತೆ ಶಿವರಾಜ್ ಕುಮಾರ್ ಕೂಡಾ ರೌಡಿಸಂ ಕಥಾವಸ್ತುವುಳ್ಳ ಚಿತ್ರಗಳಿಗೇ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರಂತೆ.
ಇತ್ತೀಚೆಗೆ ಬಿಡುಗಡೆಯಾದ ತಾಯಿಯ ಮಡಿಲು, ಗಂಡನ ಮನೆ ಚಿತ್ರಗಳ ಸೋಲಿನ ಹಿನ್ನೆಲೆಯಲ್ಲಿ ಸಣ್ಣದೊಂದು ಸಕ್ಸಸ್ ನೀರೀಕ್ಷೆಯಲ್ಲಿರುವ ಶಿವಣ್ಣ ಅನಿವಾರ್ಯವಾಗಿ ಮತ್ತೊಮ್ಮೆ ಮಚ್ಚು ಹಿಡಿದಿದ್ದಾರೆ.
ಹೀಗೆ ರೌಡಿಸಂ ಕಥಾವಸ್ತುವುಳ್ಳ ಈ ಚಿತ್ರದ ಹೆಸರು ಮಾದೇಶ. `ಗಂಡಹೆಂಡತಿ ಖ್ಯಾತಿಯ ರವಿ ಶ್ರೀವತ್ಸ ಚಿತ್ರದ ನಿರ್ದೇಶಕ.
ಹಾಗೆ ನೋಡಿದರೆ `ಮಾದೇಶನ ಪಾತ್ರ ನಿರ್ದೇಶಕ ಪ್ರೇಮ್ ಕಲ್ಪನೆ. ಜೋಗಿ ಚಿತ್ರದ ಮಾದೇಶ ಎಂಬ ಪಾತ್ರದ ಹೆಸರನ್ನೇ ಬಳಸಿಕೊಳ್ಳುವ ಮೂಲಕ ರವಿ ಶ್ರೀವತ್ಸ ಶಿವಣ್ಣನಿಗೆ ವಿಚಿತ್ರ ಗೆಟಪ್ ನೀಡಿದ್ದಾರಂತೆ.
`ಈ ಚಿತ್ರದಲ್ಲಿ ನನ್ನ ಕೂದಲು ಕೆಸರಿರುತ್ತದೆ. ಬೇರೆ ಸಿನಿಮಾಗಳಲ್ಲಿ ಇರುವ ಕೇಶ ವಿನ್ಯಾಸ ಇಲ್ಲಿ ಇರಲ್ಲ. ಕೇಶ ವಿನ್ಯಾಸದಿಂದ ಹಿಡಿದು ಬೇರೆಲ್ಲಾ ದೃಷ್ಟಿಯಿಂದಲೂ ಈ ಸಿನಿಮಾ ತೀರಾ ಭಿನ್ನ ಅಂತೇನೋ ಹೇಳಿದ್ದಾರೆ ಶಿವಣ್ಣ,
ಆದರೆ ಯಶಸ್ವಿಗಾಗಿ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಲಾಂಗ್ ಹಿಡಿದು, ರಕ್ತ ಹರಿಸಿ ಅಬ್ಬರಿಸುತ್ತಿದ್ದರೆ ಅವರೊಳಗಿನ ಅಪ್ಪಟ ಕಲಾವಿದನಿಗೆ ಮೋಸಮಾಡಿದಂತಾಗುವುದಿಲ್ಲವೇ ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ!