ಜೂನಿಯರ್ ಶಂಕರ್‌ನಾಗ್ ವರಸೆ ಬದಲಾಯ್ತು!
ಬೆಂಗಳೂರು, ಗುರುವಾರ, 15 ನವೆಂಬರ್ 2007( 18:35 IST )
ಶಿಷ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟ ದೀಪಕ್ ಇದೀಗ ವಿವಾದಗಳ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ.
`18 ನೇ ಕ್ರಾಸ್ ಎಂಬ ವಿಚಿತ್ರ ಟೈಟಲ್ ಸಿನಿಮಾದ ಸಹ ನಿರ್ದೇಶಕರೊಬ್ಬರಿಗೆ ಇದೇ ದೀಪಕ್ ಕಪಾಳ ಮೋಕ್ಷ ಮಾಡಿದ್ದು ಈಗ ಹಳೇ ಸುದ್ದಿ.
ಹೊಸ ಸುದ್ದಿ ಏನಪ್ಪಾ ಅಂದ್ರೆ ಹೀಗೆ `ಕಪಾಳ ಮೋಕ್ಷ ಪ್ರಹಸನ ನಡೆದ ನಂತ್ರ ಗಾಂಧಿನಗರ ಮಂದಿ `ಶಿಷ್ಯ ದೀಪಕ್‌ನ ಹೆಸರು ಕೇಳಿದ್ರೆ ಸಾಕು ಬೆಚ್ಚಿ ಬೀಳುತ್ತಿದ್ದಾರಂತೆ !
ಸದಾ ತನ್ನ ಸುತ್ತ ಹುಡುಗರ ಬೆಟಾಲಿಯನ್ ಇಟ್ಟುಕೊಂಡು `ರಿಯಲ್ ಡಾನ್ ರೀತಿ ವರ್ತಿಸುವ ದೀಪಕ್ `ನಾನು ಶಂಕರ್‌ನಾಗ್ ಥರಾ ಇದ್ದೀನಿ, ಶಂಕರ್‌ನಾಗ್ ಥರಾನೇ ಬೆಳೀತಿನಿ ಎಂಬಂತೆ ವರ್ತಿಸುತ್ತಿರೋದನ್ನ ಕಂಡ ಗಾಂಧಿನಗರದ ಸಿನಿ ಪಂಡಿತರು ಪಕ ಪಕನೆ ನಗುತ್ತಿದ್ದಾರಂತೆ.
ಈ ನಡುವೆಯೇ ಎಸ್. ಉಮೇಶ್ ನಿರ್ದೇಶನದ `ಚೆನ್ನ ಎಂಬ ಚಿತ್ರದಲ್ಲಿ ದೀಪಕ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚೆನ್ನ ಎಂಬ ಹೆಸರೇನೋ ಚೆನ್ನಾಗಿದೆ, ಆದ್ರೆ ನಮ್ಮ ಜೂನಿಯರ್ ಶಂಕರ್‌ನಾಗ್ ಚೆನ್ನಾಗಿ ಅಭಿನಯಿಸ್ತಾರಾ ಅನ್ನೋದು ನಮ್ಮ ಅನುಮಾನ ಅನ್ನೋ ಕುಹಕ ಕಾನಿಷ್ಕಾ ಹೋಟೆಲ್ ಆವರಣದಲ್ಲಿ ಕೇಳಿ ಬಂದಿದ್ದು ಬಹುಶಃ ಕರಾಟೆ ಕಿಂಗ್ ದೀಪಕ್‌ಗೆ ಕೇಳಿಸಿರಲಾರದು!!