ಈ ಟಿವಿಯಲ್ಲಿ ಮಿಂಚದ ಮಿಂಚು
ಬೆಂಗಳೂರು, ಗುರುವಾರ, 15 ನವೆಂಬರ್ 2007( 18:41 IST )
ಕಿರುತೆರೆಯ ಸೂಪರ್ ಸ್ಟಾರ್ ನಿರ್ದೇಶಕ ಟಿ.ಎನ್ ಸೀತಾರಾಂ ನಿರ್ದೇಶನದ `ಮಿಂಚು ಹೆಚ್ಚು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆಯಂತೆ.
ಮಾಯಾಮೃಗ, ಮನ್ವಂತರ, ಮುಕ್ತಾದಂತಹ ಸೂಪರ್ ಹಿಟ್ ಮೆಗಾ ಸೀರಿಯಲ್‌ಗಳನ್ನ ಟಿವಿ ಪ್ರೇಕ್ಷಕನಿಗೆ ರುಚಿ ರುಚಿಯಾಗಿ ಉಣಬಡಿಸಿ ಯಶಸ್ವಿಯಾದ ಸೀತಾರಾಂ ಇದೀಗ `ಮಿಂಚು ಮೂಲಕ ಸೋತದ್ದು ಎಲ್ಲಿ ಎಂಬ ಗೊಂದಲದಲ್ಲಿದ್ದಾರಂತೆ!
ಪ್ರತಿ ನಿತ್ಯ ರಾತ್ರಿ ಈ ಟಿವಿಯಲ್ಲಿ ಪ್ರಸಾರಗೊಳ್ಳುವ `ಮಿಂಚು ಈಗಾಗಲೇ ಸೀರಿಯಲ್ ಪ್ರೇಮಿಗಳಿಗೆ ಬೋರ್ ಹೊಡೆಸುತ್ತಿರೋದು ತಾಜಾ ಇಶ್ಯೂ ಆಗಿಬಿಟ್ಟಿದೆ. ಮುಕ್ತಾದಲ್ಲಿ ಕಂಡ ಭರ್ಜರಿ ಜನಪ್ರಿಯತೆ `ಮಿಂಚು ಸೀರಿಯಲ್‌ನಲ್ಲಿ ಬಾರದ ಕಾರಣ ಸೀತಾರಾಂ ಸೀರಿಯಸ್ ಆಗಿದ್ದಾರಂತೆ.
ಈ ನಡುವೆ ಸೇತುರಾಂ ನಿರ್ದೇಶನದ `ಮಂಥನ ಅತಿ ಹೆಚ್ಚು ಜನಪ್ರಿಯ ಗೊಂಡಿದೆ. ಈ ಸೀರಿಯಲ್ ಶೀರ್ಷಿಕೆ ಗೀತೆ `ಜೀವ ಭಾವದಲಿ ನೋವು ನಲಿವುಗಳ ರಿಂಗಣ ..ಮಂಥನ.. ಎಂಬ ಹಾಡಂತೂ ಮಕ್ಕಳು ದೊಡ್ಡವರೆನ್ನದೆ ಎಲ್ಲರ ನಾಲಿಗೆಯಲ್ಲೂ ನಲಿದಾಡುತ್ತಿರುವುದು ಅದರ ಜನಪ್ರಿಯತೆಗೆ ಸಾಕ್ಷಿ.