ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಈಗ ಹಾರರ್ ಸೀರಿಯಲ್ ಸರದಿ!
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡದಲ್ಲಿ ಧಾರಾವಾಹಿಗಳಿಗೇನು ಕಡಿಮೆ ಇಲ್ಲ. ಆದರೆ ಉತ್ತಮ ಕಥೆಯುಳ್ಳ ವಿಭಿನ್ನ ಧಾರಾವಾಹಿಗಳು ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲೂ ಹಾರರ್ ಕಥೆಯುಳ್ಳ ಧಾರಾವಾಹಿಗಳಂತೂ ತುಂಬಾ ವಿರಳ ಎಂದೇ ಹೇಳಬಹುದು.

ಈ ನಿಟ್ಟಿನಲ್ಲಿ ಮಲೈ ಮಹದೇಶ್ವರ ಕಂಬೈನ್ಸ್ ಎ.ಎಂ.ಕ್ರಿಯೇಶನ್ಸ್ ವತಿಯಿಂದ ಮೊದಲಬಾರಿಗೆ `ಶ್..ಎಚ್ಚರ ಎಂಬ ಹಾರರ್ ಧಾರಾವಾಹಿಯನ್ನು ನಿರ್ಮಿಸಲಾಗುತ್ತಿದೆ. ಉತ್ತಮ ತಂತ್ರಜ್ಞರು, ಕಲಾವಿದರನ್ನು ಬಳಸಿಕೊಂಡು ನಿರ್ಮಿಸಲಾಗುತ್ತಿರುವ ಈ ಮೆಗಾ ಧಾರಾವಾಹಿ ಏಷ್ಯಾನೆಟ್ ಚಾನೆಲ್‌ನಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರಗೊಳ್ಳಲಿದೆ.

ಈ ಧಾರಾವಾಹಿಯ ನಿರ್ಮಾಪಕರು ಮಹದೇವಯ್ಯ. ಧಾರಾವಾಹಿಗೆ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಒದಗಿಸಿರುವ ಪತ್ರಕರ್ತ ಪಿ.ಸೋಮೇಶ್ ಹೇಳಿದ್ದು ಹೀಗೆ:

`ಕಿರುತೆರೆಯಲ್ಲೇ ಇದೊಂತರಾ ಹೊಸಾ ಪ್ರಯೋಗ. ಪ್ರತಿ ಐದು ಎಪಿಸೋಡ್‌ಗೆ ಒಂದು ಕಥೆ ಮುಗಿಯುತ್ತದೆ. ಎಲ್ಲಾ ಕಥೆಗಳು ಭಯಾನಕವಾಗಿರುತ್ತದೆ. ಪ್ರತಿ ರಾತ್ರಿ 10 ರಿಂದ 10-30ರವರೆಗೆ ಪ್ರಸಾರವಾಗಲಿದೆ. ಇದೊಂದು ವಿಭಿನ್ನವಾದ ಹಾರರ್ ಸಬ್ಜೆಕ್ಟ್. ಪ್ರತೀ ಕಥೆಗೂ ಕಲಾವಿದರು ಬದಲಾಗುತ್ತಾರೆ. ಹಾರರ್ ಹೆಸರಿನಲ್ಲಿ ಕ್ರೌರ್ಯ, ಹಿಂಸೆ, ಅಶ್ಲೀಲತೆ ತುರುಕುವುದಿಲ್ಲ. ಎಂದರು ಸೋಮೇಶ್. ಅಂದಹಾಗೆ ಧಾರಾವಾಹಿಯ ನಿರ್ದೇಶಕ ಮಂಜು ಸ್ವರಾಜ್.

`ಇದನ್ನು ಒಂದು ರೀತಿ ಸಿನಿಮಾದಂತೆ ನಿರ್ಮಿಸುತ್ತಿದ್ದೇವೆ. ಈ ಸೀರಿಯಲ್‌ನಲ್ಲಿ ವಿಶೇಷ ನೆರಳು ಬೆಳಕಿನಾಟ, ಮುಖವಾಡಗಳ ಬಳಕೆ ಇರುತ್ತೆ ಎಂದು ಹೇಳಿಕೊಂಡರು ಮಂಜು ಸ್ವರಾಜ್.

ದೊಡ್ಡ ಪರದೆಯಲ್ಲಿ ಹಾರರ್ ಸಿನಿಮಾಗಳನ್ನು ಎಂಜಾಯ್ ಮಾಡುವ ಪ್ರೇಕ್ಷಕ ಇದೀಗ ಪುಟ್ಟ ಪರದೆಯಲ್ಲಿ ಹಾರರ್ ಸೀರಿಯಲ್‌ಗ ಳನ್ನು ಹೇಗೆ ರೀಸೀವ್ ಮಾಡಿಕೊಳ್ತಾನೆ ಅನ್ನೋದನ್ನ ಕಾದುನೋಡಬೇಕು.