ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಂಡ ಶಾಸನ ಅಂತ್ಯ : ಇನ್ನು ವಿಜಯ್ ದುನಿಯಾ..!
ಸುದ್ದಿ/ಗಾಸಿಪ್
Feedback Print Bookmark and Share
 
ತಮ್ಮ ನಿರ್ದೇಶನದ ಚಂಡ ಚಿತ್ರದ ಡಬ್ಬಿಂಗ್ ಕಾರ್ಯದಲ್ಲಿ ಚಿತ್ರನಟ ವಿಜಯ್ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ನಿರ್ದೇಶಕ ಎಸ್. ನಾರಾಯಣ್ ಫಿಲಂ ಚೇಂಬರ್ ಮೊರೆ ಹೋದಾಗ ಹೊರಬಿದ್ದ ಫಲಶೃತಿ - ವಿಜಯ್‌ಗೆ ಒಂದು ವರ್ಷದ ಬಹಿಷ್ಕಾರ.

ಇದಕ್ಕೆ ಚಿತ್ರರಂಗದ ಹಲವು ವಲಯಗಳಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ನಾಲ್ಕು ಗೋಡೆಗಳ ನಡುವೆ ನಡೆದುಹೋಗಬಹುದಿದ್ದ ಸಂಧಾನಕ್ಕೆ ಮಾಧ್ಯಮಗಳ ಮೂಲಕ ಪ್ರಚಾರ ದೊರೆತು ಅದೊಂದು ವಿಶೇಷ ಸುದ್ದಿಯೇ ಆಗಿಹೋಗಿತ್ತು. ಒಟ್ಟಿನಲ್ಲಿ ವಿನಾಕಾರಣ ವಿಜಯ್ ಬಲಿಪಶುವಾಗಿದ್ದರು.

ಆದರೀಗ ಮನಸ್ಸಿನ ಗೊಂದಲದ ಕೊಳ ತಿಳಿಯಾಗಿದೆ. ಎರಡೂ ಪಕ್ಷಗಳ ಮನಸ್ಸೂ ಹಸಿರಾಗಿದೆ. ತತ್ಫಲವಾಗಿ ವಿಜಯ್ ವಿರುದ್ಧದ ಬಹಿಷ್ಕಾರವನ್ನು ಚೇಂಬರ್ ತೆರವುಗೊಳಿಸಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಚಿತ್ರದ ಕಥೆ ಸುಖಾಂತ್ಯ..!!

ಕರಿಯಾ ವೀ ಲವ್ ಯೂ ಕರುನಾಡ ಮೇಲಾಣೆ ಎಂಬುದೀಗ ಎಲ್ಲರೂ ಗುನುಗುತ್ತಿರುವ ಹಾಡು ಅಂದುಕೊಳ್ಳಬಹುದಲ್ಲವೇ?