ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಾಸ್ಟರ್ ಕಿಶನ್‌ಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ
ಸುದ್ದಿ/ಗಾಸಿಪ್
Feedback Print Bookmark and Share
 
ಸುಮಾರು 20 ವರ್ಷಗಳ ಹಿಂದೆ ಮಾಸ್ಟರ್ ಮಂಜುನಾಥ್‌ಗೆ ಲಭಿಸಿದ್ದ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ ಮತ್ತೆ ಕನ್ನಡದ ಬಾಲನಟನಿಗೆ ಸಂದಿದೆ. ಕೇರ್ ಆಫ್ ಫುಟ್ಪಾತ್ ಚಿತ್ರದ ನಟ ಮಾಸ್ಟರ್ ಕಿಶನ್ ಆ ಪ್ರಶಸ್ತಿ ಪಡೆದ ಬಾಲನಟ.

ಹೈದರಾಬಾದಿನಲ್ಲಿ ಚಿಲ್ಡ್ರನ್ ಸೊಸೈಟಿ ಆಫ್ ಇಂಡಿಯಾ ಆಯೋಜಿಸಿದ್ದ 15 ನೇ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವದಲ್ಲಿ ಕಿಶನ್‌ಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

20 ವರ್ಷಗಳ ಹಿಂದೆ ಶಂಕರ್‌ನಾಗ್ ನಿರ್ದೇಶನದ ಸ್ವಾಮಿ ಚಿತ್ರದ ಅಭಿನಯಕ್ಕೆ ಮಾಸ್ಟರ್ ಮಂಜುನಾಥ್‌ಗೆ ಈ ಪ್ರಶಸ್ತಿ ಬಂದಿತ್ತು. ತನ್ನ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಓಡಾಡುತ್ತಿರುವ ಕಿಶನ್ ಸದ್ಯಕ್ಕೆ ಮುಂಬೈನಲ್ಲಿದ್ದಾನೆ. ಕೇರಾಫ್ ಫುಟ್ಪಾತ್ ಚಿತ್ರವನ್ನು ಹಿಂದಿಗೆ ಡಬ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾನೆ. ಈ ಚಿತ್ರ ಹಿಂದಿಯಲ್ಲೂ ಸಹಾ ಯಶಸ್ವಿಯಾಗುವ ನಿರೀಕ್ಷೆ ಇದೆ.