ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಓಂ ಶಾಂತಿ ಓಂ ವಿರುದ್ಧ ಪ್ರತಿಭಟನೆ, ಚಿತ್ರ ಎತ್ತಂಗಡಿ
ಸುದ್ದಿ/ಗಾಸಿಪ್
Feedback Print Bookmark and Share
 
ಕರ್ನಾಟಕದಲ್ಲಿ ರಾಜ್ಯೋತ್ಸವ ನಡೆಯುವ ನವೆಂಬರ್‌ನಲ್ಲಿ ಇತರ ಭಾಷೆಯ ಚಿತ್ರಗಳು ಪ್ರದರ್ಶಿಸುವಂತಿಲ್ಲ ಎಂಬುದು ಅಲಿಖಿತ ನಿಯಮ.

ಆದರೆ ಅದನ್ನು ಕಡೆಗಣಿಸಿ ಬೇರೆ ಭಾಷಾ ಚಿತ್ರಗಳನ್ನು ಪ್ರದರ್ಶಿಸುವ ವಾಡಿಕೆ ನಡೆದುಬರುತ್ತಲೇ ಇದೆ. ಬೇರೆ ಭಾಷಾಚಿತ್ರಗಳನ್ನು ಪ್ರದರ್ಶಿಸಿದಲ್ಲಿ ಅಲ್ಲಲ್ಲಿ ಕನ್ನಡ ಪರ ಸಂಘಟನೆಗಳು ಅದರ ವಿರುದ್ಧ ಪ್ರತಿಭಟನೆ ನಡೆಸುತ್ತವೆ.

ಇಂತಹ ಪ್ರತಿಭಟನೆಯ ಬಿಸಿ ಶಾರುಕ್‌ ಖಾನ್ ಅಭಿನಯದ, ಭರ್ಜರಿಯಾಗಿ ಓಡುತ್ತಿರುವ ಹಿಂದಿ ಚಿತ್ರ ಓಂ ಶಾಂತಿ ಓಂಗೆ ತಟ್ಟಿದೆ. ಶಿವಮೊಗ್ಗದ ವೀರಭದ್ರೇಶ್ವರ ಚಿತ್ರಮಂದಿರದಿಂದ ಆ ಚಿತ್ರಕ್ಕೆ ಕೊಕ್ ನೀಡಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಿಂದಿ ಚಿತ್ರ ಪ್ರದರ್ಶಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರಿಂದ ಓಂ ಶಾಂತಿ ಓಂ ಚಿತ್ರ ಪ್ರದರ್ಶನ ರದ್ದುಗೊಳಿಸಲಾಗಿದೆ.

ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಚಿತ್ರಮಂದಿರಕ್ಕೆ ನುಗ್ಗಿ ಪೋಸ್ಟರ್‌ಗಳನ್ನು ಹರಿದುಹಾಕಿ ಪ್ರತಿಭಟನೆ ನಡೆಸಿದರು. ಕೂಡಲೇ ಚಿತ್ರ ಪ್ರದರ್ಶನ ರದ್ದು ಮಾಡಿದ ಚಿತ್ರಮಂದಿರದ ಮಾಲೀಕರು ಕನ್ನಡ ಚಿತ್ರ ಐಶ್ವರ್ಯ ಪ್ರದರ್ಶಿಸುತ್ತಿದ್ದಾರೆ. ಓಂ ಶಾಂತಿ ಓಂ ಹಾಗೂ ಐಶ್ವರ್ಯ ಚಿತ್ರಗಳಲ್ಲಿ ಕನ್ನಡ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ.