ಗಣೇಶ್ ಜೊತೆ ರಮ್ಯ
ಬೆಂಗಳೂರು, ಮಂಗಳವಾರ, 4 ಡಿಸೆಂಬರ್ 2007( 11:09 IST )
ಮುಂಗಾರುಮಳೆಯ ಯಶಸ್ಸಿನಿಂದ ಒಮ್ಮೆಲೇ ಮೇಲಕ್ಕೆ ಜಿಗಿದ ಗಣೇಶ್‌ಗೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. ಅದೇ ರೀತಿ ಕನ್ನಡ ಚಿತ್ರರಂಗದ ಖ್ಯಾತ ತಾರೆ ರಮ್ಯ ಅವರಿಗೂ ಇರುವ ಬೇಡಿಕೆಯೂ ಹೆಚ್ಚು.
ಇಬ್ಬರು ತಾರಾ ಜೊಡಿಯನ್ನು ಹಾಕಿಕೊಂಡು ಚಿತ್ರ ನಿರ್ಮಾಣ ಮಾಡಿದರೆ ಹೇಗೆ ಎಂದು ಖ್ಯಾತ ನಿರ್ಮಾಪಕ ಹಾಗೂ ನಟ ರಾಕಲೈನ್ ಅವರಿಗೆ ಉಪಾಯ ಹೊಳೆಯಿತು. ಅವರು ಪ್ರಯತ್ನಕ್ಕೆ ಫಲ ದೊರೆತಿದೆ.
ಅವರು ನಿರ್ಮಿಸಲಿರುವ ಹೊಸ ಚಿತ್ರದಲ್ಲಿ ರಮ್ಮ ಗಣೇಶ್ ಜೋಡಿಯಾಗಿ ಅಭಿನಯಿಸಲಿದ್ದಾರೆ. ಈ ಚಿತ್ರ ಈ ತಿಂಗಳ 14ರಂದು ಸೆಟ್ಟೇರಲಿದೆ. ಈ ಚಿತ್ರದ ನಿರ್ದೇಶಕ ಯಾರು ಎಂಬುದು ಇನ್ನೂ ಖಚಿತಗೊಂಡಿಲ್ಲವಾದರೂ ಯೋಗರಾಜಭಟ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕೇಳಿಬರುತ್ತಿದೆ.
ಈ ಜೋಡಿಯ ಸಿನೆಮಾ ಖಂಡಿತ ಯಶಸ್ವಿಯಾಗುತ್ತದೆ ಎಂದು ಚಿತ್ರ ರಸಿಕರು ಭಾವಿಸುತ್ತಿದ್ದಾರೆ.