ಮತ್ತೆ ಕನ್ನಡ ಚಿತ್ರದಲ್ಲಿ ಪ್ರಭುದೇವ್
ಬೆಂಗಳೂರು, ಮಂಗಳವಾರ, 4 ಡಿಸೆಂಬರ್ 2007( 11:11 IST )
ಮೂಳೆ ಇಲ್ಲದ ಡ್ಯಾನ್ಸರ್ ಎಂದೇ ಖ್ಯಾತಿ ಗಳಿಸಿರುವ ಪ್ರಭುದೇವ್ ಮತ್ತೊಮ್ಮೆ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ.
ಅಭಿನಯ ಅಂದರೆ ಚಿತ್ರದ ಹಾಡೊಂದರಲ್ಲಿ ಕುಣಿಯಲಿದ್ದಾರೆ. ಬಾಲಿವುಡ್ ಹಾಗೂ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟ, ನಿರ್ದೇಶಕ್, ನೃತ್ಯ ನಿರ್ದೇಶಕ ಪ್ರಭುದೇವ್ ಅವರನ್ನು ಕನ್ನಡದ ಜಮಾನಾ ಚಿತ್ರದಲ್ಲಿ ನಟಿಸುವಂತೆ ಚಿತ್ರ ನಿರ್ದೇಶಕ ಶಂಕರ್ ಕೋರಿದ್ದಾರೆ.
ಒಂದು ಹಾಡಿನಲ್ಲಿ ಮಾತ್ರ ತಾವು ಡ್ಯಾನ್ಸ್ ಮಾಡುವುದಾಗಿ ಪ್ರಭುದೇವ್ ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಪ್ರಭುದೇವ್ ಅವರ ಡ್ಯಾನ್ಸ್ ಯಾವಾಗ ಚಿತ್ರೀಕರಣಗೊಳ್ಳಲಿದೆ ಎಂದು ಇನ್ನು ನಿಗದಿಯಾಗಿಲ್ಲ. ಒಟ್ಟಿನಲ್ಲಿ ಪ್ರಭುದೇವ್ ಮತ್ತೊಮ್ಮೆ ಕನ್ನಡ ಪ್ರೇಕ್ಷಕರಿಗೆ ತಮ್ಮ ಡ್ಯಾನ್ಸ್ ಉಣಬಡಿಸಲಿದ್ದಾರೆ.