ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರವಿಶಂಕರ್ ನಾಯಕನಾಗಿ ಪ್ರೀತಿಯ ಕಡೆ ಪಯಣ
ಸುದ್ದಿ/ಗಾಸಿಪ್
Feedback Print Bookmark and Share
 
ಈ ಟಿವಿಯ ಸಿಲ್ಲಿ ಲಲ್ಲಿಯ ಖ್ಯಾತಿ ರವಿಶಂಕರ್ ಎಂದರೆ ಕರ್ನಾಟಕದಲ್ಲಿ ಗೊತ್ತಿಲ್ಲದವರಿಲ್ಲ. ಈಗ ರವಿಶಂಕರ್ ಪ್ರೀತಿಯ ಕಡೆ ಪಯಣ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಸಹಾಯಕ, ಸಹ ನಿರ್ದೇಶಕರಾಗಿ ಅನುಭವ ಪಡೆದಿರುವ ಕಿರಣ ಪ್ರೀತಿ ಕಡೆ ಪಯಣ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಪಲ್ಲಕ್ಕಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ರಮನೀತೂ ಚೌಧರಿ ಈ ಚಿತ್ರದಲ್ಲೂ ನಾಯಕಿ. ಆಕೆ ಈ ಚಿತ್ರದಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿ. ಕನ್ನಡ ನಾಡಿನ ಸಂಸ್ಕ್ಕತಿ ಅಧ್ಯಯನಕ್ಕಾಗಿ ಬಾದಾಮಿ, ಐಹೊಳೆ, ಪಟ್ಟದಕಲ್ಲು ಹೀಗೆ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುತ್ತಾಳೆ. ಆಕೆಯ ಕಾರು ಚಾಲಕನಾಗಿ ರವಿಶಂಕರ್ ಅಭಿನಯಿಸಲಿದ್ದಾರೆ.

ಕುಟುಂಬದ ಎಲ್ಲ ಸದಸ್ಯರು ಸಂಕೋಚವಿಲ್ಲದೆ ಈ ಚಿತ್ರವನ್ನು ವೀಕ್ಷಿಸುವಂಥ ಸ್ಟೋರಿ ಇದ್ದು, ಚಿತ್ರದಲ್ಲಿ ಎಲ್ಲೂ ಹೊಡಿಬಡಿ ದೃಶ್ಯಗಳಿಲ್ಲ. ಪ್ರೇಕ್ಷಕರು ಚಿತ್ರ ನೋಡುವಾಗ ಕಣ್ಣುಮುಚ್ಚಿಕೊಳ್ಳುವ ಸನ್ನಿವೇಶಗಳಿಲ್ಲ ಎಂದು .....ಪಯಣ ಚಿತ್ರದ ನಿರ್ದೇಶಕ ಕಿರಣ್ ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ತಮ್ಮ ಬಳಿ ಇದ್ದ ಈ ಚಿತ್ರ ಕಥೆಗೆ ಈಗ ಅಂತಿಮ ರೂಪ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ದೊರೆತಿದ್ದು, ಈ ಚಿತ್ರದ ಮೂಲಕ ಮತ್ತಷ್ಟು ಜನಪ್ರಿಯತೆಯನ್ನು ಬಾಚಿಕೊಳ್ಳುವ ಆಸೆ ತಮ್ಮದು ಎಂದು ರವಿಶಂಕರ್ ತಿಳಿಸಿದ್ದಾರೆ.

ಈ ಚಿತ್ರದಲ್ಲಿ ತಮ್ಮ ಪಾತ್ರ ಲವ್ ಮಾಡುವುದರೊಂದಿಗೆ ಕಾಮೆಡಿಯೂ ಇದೆ ಅವರು ಹೇಳಿದರು. ಒಂದು ಐಟಂ ಸಾಂಗ್ ಮತ್ತು ಆರು ಹಾಡುಗಳು ಈ ಚಿತ್ರದಲ್ಲಿವೆ ಎಂದು ಸಂಗೀತ ನಿರ್ದೇಶಕ ಹರಿಕೃಷ್ಣ ತಿಳಿಸಿದ್ದಾರೆ.