ಈ ಬಂಧನಕ್ಕೆ ಮತ್ತೆ ಷೂಟಿಂಗ್
ಬೆಂಗಳೂರು, ಮಂಗಳವಾರ, 4 ಡಿಸೆಂಬರ್ 2007( 11:14 IST )
ರಿಮೇಕ್ ಆದರೆ ಸರ್ಕಾರದಿಂದ ಶೇ. ನೂರರಷ್ಟು ಮನರಂಜನೆ ರಿಯಾಯಿತಿ ದೊರೆಯುತ್ತಿದೆ. ಆದರೆ ಅದಕ್ಕೆ ಮುನ್ನ ಚಿತ್ರವನ್ನು ವೀಕ್ಷಿಸಿ ವಾರ್ತಾ ಮತ್ತು ಪ್ರಸಾರ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಬಂಧನ ಚಿತ್ರ ಅಮಿತಾಭ್, ಜಯಪ್ರದಾ ನಟಿಸಿದ್ದ ಬಾಗ್ಬಾನ್ ಚಿತ್ರದ ರಿಮೇಕ್ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಆದರೆ ಇದು ರಿಮೇಕ್ ಅಲ್ಲ ಸ್ವಮೇಕ್ ಎಂಬ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಹೇಳುತ್ತಿದ್ದರೂ ಅಧಿಕಾರಿಗಳು ಒಪ್ಪಲಿಲ್ಲ. ಪರಿಣಾಮವಾಗಿ ಜೈಜಗದೀಶ್ ಅವರು ಈ ಬಂಧನ ಚಿತ್ರದಲ್ಲಿ ಕೆಲ ಬದಲಾವಣೆ ಮಾಡಿದ್ದಾರೆ.
ಬದಲಾದ ಸನ್ನಿವೇಶಗಳ ಚಿತ್ರೀಕರಣವನ್ನು 7 ದಿನ ನಡೆಸಿದ್ದಾರೆ. ಇದರೊಂದಿಗೆ ಶೇ. 30ರಷ್ಟು ಭಾಗ ಹೊಸ ಕಥೆ ಈ ಬಂಧನ ಚಿತ್ರಕ್ಕೆ ಸೇರ್ಪಡೆಯಾಗಿದೆ. ಇದರಿಂದ ನಿರ್ಮಾಪಕರಿಗೆ 16 ಲಕ್ಷ ರೂ. ಹೆಚ್ಚುವರಿಯಾಗಿ ವೆಚ್ಚವಾಯಿತು.