ಪುನಿತ್ ಜತೆ ರಮ್ಯಾ ?
ಬೆಂಗಳೂರು, ಗುರುವಾರ, 6 ಡಿಸೆಂಬರ್ 2007( 18:31 IST )
ಹಿಂದೆ ಡಾ.ರಾಜಕುಮಾರ್ ನಾಯಕರಾಗಿ ನಟಿಸುವ ಚಿತ್ರ ಸೆಟ್ಟೇರುವ ಮುನ್ನ ಅವರ ಹೀರೋಯಿನ್ ಯಾರು ಎನ್ನುವ ಪ್ರಶ್ನೆ ಎದುರಾಗುತ್ತಿತ್ತು. ಅವರ ಎದುರು ನಾಯಕಿಯಾಗಿ ನಟಿಸಲು ಅವಕಾಶ ದೊರೆತರೆ ಸಾಕು ಎನ್ನುತ್ತಿದ್ದರು ಖ್ಯಾತ ನಟಿಯರು.
ಈಗ ಅವರ ಪುತ್ರ ಪುನೀತ್ ರಾಜ್‌ಕುಮಾರ್ ಅವರು ಅಭಿನಯಿಸಲಿರುವ ಚಿತ್ರ ಸೆಟ್ಟೇರುವ ಮುನ್ನ ಅಂತಹ ಕುತೂಹಲ ಸ್ಯಾಂಡಲ್‌ವುಡ್ನಲ್ಲಿ ನಿರ್ಮಾಣವಾಗುತ್ತಿದೆ. ಅವರ ಹೊಸ ಚಿತ್ರದಲ್ಲಿ ಪರಭಾಷೆಯ ನಟಿ ನಾಯಕಿ ಆಗುತ್ತಾರೆ ಎಂಬುದು ಕನ್ನಡ ಪ್ರೇಕ್ಷಕರ ಅಭಿಮತ.
ಅಪ್ಪು ಅಭಿನಯದ ಹೊಸ ಚಿತ್ರವನ್ನು ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ಶೋಭನ್ ಎಂಬ ತೆಲುಗಿನ ನಿರ್ದೇಶಕರ ನಿರ್ದೇಶನದಲ್ಲಿ ರೂಪುಗೊಳ್ಳಲಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರದಲ್ಲಿ ರಮ್ಯ ನಾಯಕಿ ಆಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ರಾಕ್ಲೈನ್ ವೆಂಕಟೇಶ್ ಚಿತ್ರದಲ್ಲಿ ಗಣೇಶ್ ಎದುರು ರಮ್ಯ ಅಭಿನಯಿಸಲಿದ್ದಾರೆ, ಅಂತೂ ಇಂತು ಪ್ರೀತಿ ಬಂತು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ, ಎಂಬ ಸುದ್ದಿಗಳ ಜೊತೆಯಲ್ಲಿ ರಮ್ಯ ಪುನೀತ್ ಜೊತೆ ಅಭಿನಯಿಸಲಿರುವ ಸುದ್ದಿಯೂ ಹರಡಿದೆ. ಆ ಸುದ್ದಿ ನಿಜವಾಗಲಿ ಎನ್ನುವುದು ಚಿತ್ರರಸಿಕರ ಹಾರೈಕೆ.