ಮಂಜು ವಾಣಿ
ಬೆಂಗಳೂರು, ಶುಕ್ರವಾರ, 7 ಡಿಸೆಂಬರ್ 2007( 16:01 IST )
ಕಷ್ಟ ಬಂದಾಗ ವೇದಾಂತ ಹೊರಹೊಮ್ಮುತ್ತದೆ ಎಂಬುದಕ್ಕೆ ನಿರ್ಮಾಪಕ ಮಂಜುವೇ ಸಾಕ್ಷಿ. ಅವರ ನಿರ್ಮಾಣದ ಮಾತಾಡ್ ಮಾತಾಡು ಮಲ್ಲಿಗೆ ಸೋತಿದ್ದಕ್ಕೆ ಕಾರಣಗಳನ್ನು ಹುಡುಕಲು ಅವರು ಹೋಗಲಿಲ್ಲ.
ಕಾಲ ಮತ್ತು ಪ್ರವಾಹ ಯಾರಿಗೂ ಕಾಯುವುದಿಲ್ಲ ಎಂಬ ಮಾತು ಮಂಜು ಬಾಯಿಂದ ಹೊರಬಿದ್ದ ತಕ್ಷಣ ಪತ್ರಕರ್ತರು ಅವಾಕ್ಕಾದರು. ಕಷ್ಟದಲ್ಲಿದ್ದಾಗ ತನಗೆ ಸಹಾಯಹಸ್ತ ಚಾಚಿದವರ ಬಗ್ಗೆ ಅವರು ಹೆಮ್ಮೆಪಟ್ಟರು. ಮಲ್ಲಿಗೆ ಸಿನೆಮಾದಿಂದ ಅವರು ಕಳೆದುಕೊಂಡಿದ್ದು ಒಟ್ಟು ಎರಡು ಕೋಟಿ ರೂ.
ಅದರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ ಎನ್ನುವ ಅವರು ಆ ನಷ್ಟವನ್ನು ಭರ್ತಿಮಾಡಲು ವರ್ಷಕ್ಕೆ ನಾಲ್ಕು ಚಿತ್ರಗಳನ್ನು ನಿರ್ಮಿಸಿ ಬಿಡುಗಡೆ ಮಾಡುವ ಮೆಗಾ ಯೋಜನೆ ಹೊಂದಿದ್ದಾರೆ.
ಆ ಚಿತ್ರಗಳಿಗೆ ಐವತ್ತು ಲಕ್ಷ ರೂ.ನಂತೆ ಹಣ ನೀಡುವ ಗೆಳೆಯರೂ ಇದ್ದಾರೆ ಅವರಿಗೆ. ಅದು ಅವರಿಗೆ ಇಷ್ಟವಿಲ್ಲ. ಮಾತಾಡ್ ಮಾತಾಡು ಮಲ್ಲಿಗೆ ಸೋತಿದ್ದರಿಂದ ನೊಂದುಕೊಂಡಿರುವ ವಿಷ್ಣುವರ್ಧನ್ ಅವರು ಮಂಜುಗೆ ಫ್ರೀ ಕಾಲ್ಷೀಟ್ ಕೊಡಲು ಒಪ್ಪಿದ್ದಾರಂತೆ.