ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೂರು ಸೀರಿಯಲ್‌ಗಳ ನಿರ್ದೇಶಕ ಜಯಂತ್
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡ ಟಿವಿ ವಾಹಿನಿಗಳ ಸಂಖ್ಯೆ ಹೆಚ್ಚಾದಂತೆ ಅವುಗಳಿಗೆ ಅಗತ್ಯವಿರುವ ಮೆಗಾ ಧಾರಾವಾಹಿಗಳ ಸಂಖ್ಯೆಯೂ ಹೆಚ್ಚಿದೆ. ಹಾಗೇ ಮೆಗಾ ಸೀರಿಯಲ್ ನಿರ್ದೇಶಕರ ಸಂಖ್ಯೆಯೂ ಹೆಚ್ಚಿದೆ.

ಒಬ್ಬೊಬ್ಬ ನಿರ್ದೇಶಕರು ಎರಡೆರಡು ಸೀರಿಯಲ್ ನಿರ್ದೇಶನ ಮಾಡಿ ವೀಕ್ಷಕರ ಮೇಲೆ ಎಸೆಯುತ್ತಿದ್ದಾರೆ. ಹೀಗೆ ಒಟ್ಟಿಗೆ ಮೂರು ಸೀರಿಯಲ್‌ಗಳನ್ನು ನಿರ್ದೇಶಿಸುತ್ತಿರುವ ಜಯಂತ್ ಮೊನ್ನೆ ಪತ್ರಕರ್ತರನ್ನು ಭೇಟಿಯಾಗಿದ್ದರು. ಈ ಟಿವಿಯ ಜನಪ್ರಿಯ ಮಳೆಬಿಲ್ಲು, ಕಸ್ತೂರಿ ಚಾನೆಲ್‌ಗಾಗಿ ಸಹಗಮನ ಹಾಗೂ ಸುಪನಾತಿ ಸುಬ್ಬಿ ಮೆಗಾ ಧಾರಾವಾಹಿಗಳನ್ನು ಜಯಂತ್ ನಿರ್ದೇಶಿಸುತ್ತಿದ್ದಾರೆ.

ಈ ಸೀರಿಯಲ್‌ಗಳಲ್ಲಿ ಪ್ರತಿ ಶುಕ್ರವಾರದಿಂದ ಭಾನುವಾರದವರೆಗೆ ರಾತ್ರಿ 9.30ರವರೆಗೆ ಪ್ರಸಾರವಾಗುವ ಸುಪನಾತಿ ಸುಬ್ಬಿ ಮನೆ ಮಾತಾಗಿದೆ. ಇನ್ನು ಪ್ರತಿ ಮಧ್ಯಾಹ್ನ ಎರಡಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುವ ಸಹಗಮನ 50 ಕಂತುಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.

ಈ ಎರಡು ಧಾರಾವಾಹಿಗಳನ್ನು ಜನ ಮೆಚ್ಚುವಂತೆ ಮಾಡುವ ಜವಾಬ್ದಾರಿ ತಮ್ಮ ಮೇಲಿದೆ ಎಂದ ಅವರು ಅದಕ್ಕೆ ತಮ್ಮ ಶಕ್ತಿ ಮೀರಿ ಪ್ರಯತ್ನಿಸುವ ಬಗ್ಗೆ ಪ್ರಮಾಣ ಮಾಡಿದರು.

ಸುಪನಾತಿ ಸುಬ್ಬಿಯ ಒಂದು ಕಂತಿಗೆ ಒಂದು ಕತೆ ಮುಗಿಸುವ ಇರಾದೆ ಅವರಿಗಿದೆ. ಒಂದು ಕಂತಿನಲ್ಲಿ ಒಂದು ಪಾತ್ರಕ್ಕೆ ಮಾತನಾಡಲು ಅವಕಾಶ ನೀಡದೆ ಜನರನ್ನು ನಗಿಸುವ ಸನ್ನಿವೇಶಗಳನ್ನು ರೂಪಿಸುವ ಯೋಚನೆ ಇದೆ ಎಂದರು.