ತೆಲುಗಿಗೆ ಗಂಡ ಹೆಂಡತಿ ಡಬ್
ಬೆಂಗಳೂರು, ಶುಕ್ರವಾರ, 7 ಡಿಸೆಂಬರ್ 2007( 16:06 IST )
ಕರ್ನಾಟಕದಲ್ಲಿ ಯಶಸ್ಸು ಕಾಣದ ಗಂಡ ಹೆಂಡತಿ ಚಿತ್ರ ಇದೀಗ ಆಂಧ್ರದಾದ್ಯಂತ ಈ ತಿಂಗಳ 14ರಂದು ಬಿಡುಗಡೆಯಾಗುತ್ತಿದೆ.
ಇದೇನು ಕನ್ನಡ ಚಿತ್ರ ಆಂಧ್ರದಲ್ಲಿ ಬಿಡುಗಡೆ ಎಂದಿರಾ? ವಿಷಯ ಇಷ್ಟೆ. ಚಿತ್ರದ ಪ್ರಿಂಟ್ ಕನ್ನಡ. ಪಾತ್ರಗಳು ಮಾತನಾಡುವುದು ತೆಲುಗು. ಗಂಡ ಹೆಂಡತಿ ಚಿತ್ರವನ್ನು ಖರೀದಿಸಿದ ವೆಂಕಟೇಶ್ವರರಾವ್ ಮತ್ತು ಜಿ.ಮುರಳಿ ಮೋಹನ್ ತೆಲುಗಿಗೆ ಡಬ್ ಮಾಡಿ ಮೊಗುಡು ಪೆಳ್ಳಾಂ ಎಂಬ ಟೈಟಲ್‌ನೊಂದಿಗೆ ಬಿಡುಗಡೆ ಮಾಡುತ್ತಿದ್ದಾರೆ.
ಸಂಜನಾ ನಟಿಸಿದ ಈ ಚಿತ್ರದಲ್ಲಿ ಹಾಟ್ ಹಾಟ್ ಸೀನ್‌ಗಳಿವೆ. ಇಂಥ ಚಿತ್ರ ಆಂಧ್ರದಲ್ಲಿ ಸಕ್ಸಸ್ ಆಗುವುದು ಗ್ಯಾರಂಟಿ ಎಂಬುದು ಚಿತ್ರ ಖರೀದಿಸಿದವರ ವಿಶ್ವಾಸ. ತಿಲಕ್ ಮತ್ತು ವಿಶಾಲ್ ಹೆಗಡೆ ಈ ಚಿತ್ರದ ಮುಖ್ಯಪಾತ್ರಗಳಲ್ಲಿದ್ದಾರೆ.