ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತಾಜ್‌ಮಹಲ್ ನಾಯಕಿ ಪೂಜಾಗಾಂಧಿ
ಸುದ್ದಿ/ಗಾಸಿಪ್
Feedback Print Bookmark and Share
 
ಮುಂಗಾರುಮಳೆ ಯಶಸ್ಸಿನೊಂದಿಗೆ ಒಮ್ಮೆಲೇ ಜಿಗಿತ ಕಂಡ ಅನೇಕರಲ್ಲಿ ಆ ಚಿತ್ರದ ನಾಯಕಿ ಪೂಜಾಗಾಂಧಿ ಒಬ್ಬರು.

ಬ್ಯುಸಿಯಾಗಿರುವ ಪೂಜಾ ಗಾಂಧಿ ಈಗ ತಾಜ್‌ಮಹಲ್ ಚಿತ್ರದಲ್ಲಿ ನಾಯಕಿ. ಪ್ರಿಯತಮೆಯನ್ನು ಪಡೆಯಲು ಏನೆಲ್ಲ ಕಷ್ಟಗಳನ್ನು ಪ್ರಿಯತಮ ಅನುಭವಿಸುತ್ತಾನೆ ಎಂಬ ಕಥೆಯುಳ್ಳ ಚಿತ್ರಕ್ಕೆ ತಾಜ್‌ಮಹಲ್ ಎಂದು ಹೆಸರಿಟ್ಟಿರುವುದು ಸೂಕ್ತವಾಗಿದೆ ಎಂಬುದು ಚಿತ್ರದ ನಾಯಕ ಅಜಯ್ ಅಭಿಪ್ರಾಯ.

ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದ ಅಜಯ್ ತಮ್ಮ ಚಿತ್ರಗಳು ಸೋತನಂತರ ಎಂಥ ಪಾತ್ರವಾದರೂ ಸಿದ್ಧ ಎಂದು ಘೋಷಿಸಿದ ಮೇಲೆ ಅವರಿಗೆ ಈ ಚಿತ್ರದಲ್ಲಿ ನಾಯಕನ ಪಾತ್ರ ದೊರೆತಿದೆ.

ಅದರಲ್ಲೂ ಮುಂಗಾರು ಹುಡುಗಿ ಜೊತೆ ನಟಿಸುತ್ತಿರುವುದು ಅವರಿಗೆ ಖುಷಿ ತಂದಿದೆ. ಆರ್. ಚಂದ್ರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಈ ತಿಂಗಳ 14ಕ್ಕೆ ಆರಂಭವಾಗಲಿದೆ.