ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಂಬರ್ ಪ್ಲೇಟ್ ಚಿತ್ರ - "ಕೆಎ 99 ಬಿ 333"
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡ ಚಿತ್ರರಂಗದಲ್ಲಿ ಚಿತ್ರಗಳ ಟೈಟಲ್‌ಗಳನ್ನು ಇಡುವುದರಲ್ಲಿ ಹೊಸ ಹಾದಿ ತುಳಿದವರು ಯಾರು ಎಂಬ ಪ್ರಶ್ನೆ ಎದುರಾದರೆ ಥಟ್ಟನೆ ನೆನಪಿಗೆ ಬರುವ ಹೆಸರು ಉಪೇಂದ್ರ. ತಮ್ಮ ಚಿತ್ರಕ್ಕೆ "ಎ" ಎಂದು ಹೆಸರಿಟ್ಟು ಚಿತ್ರರಸಿಕರಿಗೆ ಕುತೂಹಲ ಮೂಡಿಸಿದ ನಂತರ ಸಾಕಷ್ಟು ವೈವಿಧ್ಯಮಯ ಟೈಟಲ್‌ಗಳುಳ್ಳ ಸಿನೆಮಾಗಳು ಬಂದಿವೆ.

ಅಂಥ ಚಿತ್ರಗಳ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ಅದರ ಟೈಟಲ್ 'ಕೆಎ 99 ಬಿ 333'. ಹೌದಾ? ಇಂಥ ಚಿತ್ರ ಮಾಡಲು ಪ್ರೇರಣೆ ಏನು ಎಂದು ನಿರ್ದೇಶಕ ಅರುಣ್ ಕುಮಾರ್ ಅವರನ್ನು ಕೇಳಿದರೆ, ಆಟೋ ಚಾಲಕರೆಂದರೆ ತಮಗೆ ವಿಶೇಷ ಕಾಳಜಿ. ಹಾಗಾಗಿ ತಮ್ಮ ಚಿತ್ರದ ನಾಯಕನೂ ಆಟೋ ಡ್ರೈವರ್. ಚಿತ್ರದ ಟೈಟಲ್ ಆಟೋ ನಂಬರ್ ಎನ್ನುತ್ತಾರೆ.

ಈ ಹಿಂದೆ ಖಳನಾಯಕನಾಗಿ ನಟಿಸಿರುವ ಸುನೀಲ್ ವಿದ್ಯಾರ್ಥಿ ಈ ಚಿತ್ರದಲ್ಲಿ ನಾಯಕ. ಮಂಗಳೂರು ಹುಡುಗಿ ದೀಪಾಚಾರ್ಯ ಈ ಚಿತ್ರದ ನಾಯಕಿ. ಈಗಾಗಲೇ ಮಾದೇಶ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಕಬಡ್ಡಿ ಆಟಗಾರ್ತಿ. ಈಗಿರುವ ಪೊಲೀಸ್ ವ್ಯವಸ್ಥೆ, ಕೆಲ ಗೂಂಡಾಗಳಿಂದ ಆಟೋ ಚಾಲಕರು ಹೇಗೆ ಶೋಷಣೆಗೆ ಒಳಗಾಗುತ್ತಾರೆ ಎನ್ನುವುದನ್ನು ಈ ಚಿತ್ರದ ಮೂಲಕ ವಿವರಿಸಲಿರುವ ನಿರ್ದೇಶಕರು ಪ್ರೀತಿ, ಕೊಲೆ, ಸಸ್ಪೆನ್ಸ್ ಮುಂತಾದ ಅಂಶಗಳನ್ನು ತುರುಕಿದ್ದಾರೆ.