ಲವ್ವಿಲ್ಲದ, ಕಾಮಿಡಿ ಇಲ್ಲದ ಚಿತ್ರ
ಬೆಂಗಳೂರು, ಶನಿವಾರ, 8 ಡಿಸೆಂಬರ್ 2007( 17:45 IST )
ಸಿನೆಮಾ ಷೂಟಿಂಗ್ ಶುರುವಾಗುವ ಮುನ್ನವೇ ಚಿತ್ರದಲ್ಲಿ ಎಷ್ಟು ಸನ್ನಿವೇಶಗಳಿರಬೇಕು, ಎಷ್ಟು ಹಾಡಿರಬೇಕು ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡ ನಿರ್ದೇಶಕರೇ ಪರ್ಫೆಕ್ಟ್ ಎಂಬುದು ಸಿನಿಮಾ ಮಂದಿಯ ನಂಬಿಕೆ. ಅದನ್ನು ಸುಳ್ಳುಮಾಡದಂತೆ "ಚಿತ್ರದಲ್ಲಿ ಲವ್ವಿಲ್ಲ, ಕಾಮೆಡಿ ಇಲ್ಲ, 40 ದಿನ ಷೂಟಿಂಗ್, ಸಕಲೇಶಪುರದಲ್ಲಿ ಹದಿನೈದು ದಿನ. ಉಳಿದದ್ದೆಲ್ಲಾ ಬೆಂಗಳೂರಲ್ಲೆ. ಆರು ಹಾಡುಗಳಿವೆ, 64 ಸನ್ನಿವೇಶಗಳಿವೆ" ಎಂದು ರುಪಿ ಚಿತ್ರದ ಮುಹೂರ್ತದಂದೇ ಒಂದೇ ಉಸುರಿಗೆ ಹೇಳಿದವರುನಿರ್ದೇಶಕ ನವೀನ್.
ವಾಲ್ ಪೋಸ್ಟರ್‌ಗಳನ್ನು ನೋಡಿ ಈ ಚಿತ್ರದ ಮೂಲಕ ನಿರ್ಮಾಪಕರಾಗಲು ಹೊರಟಿರುವುದು ಎ.ಆರ್.ಮಧು ಅವರ ವಿಶೇಷ. ಇದೊಂದು ನೈಜ ಜಗತ್ತಿನ ಕತೆ. ಪವನ್, ಮಧು, ಗೌತಮ್ ವೆಂಕಿ ಮತ್ತು ಸುಪ್ರೀತಾ ತಾರಾ ಬಳಗದಲ್ಲಿದ್ದಾರೆ. ನಾಲ್ಕು ಜನ ನಾಯಕರಿದ್ದಾರೆ.
ಆಕ್ಟರ್ ಎಂಬ ಬಳಗವನ್ನು ಕಟ್ಟಿಕೊಂಡಿರುವ 'ಇಂತಿ ನಿನ್ನ ಪ್ರೀತಿಯ' ಚಿತ್ರದಲ್ಲಿ ಅಭಿನಯಿಸಿರುವ ಪವನ್, ಈ ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡುತ್ತಿದ್ದಾರೆ. ಸುಪ್ರೀತ ನಾಯಕಿ. ರವಿದೇವ್ ಎಂಬ ಹೆಸರಿನ ಯುವಕ ಈ ಹೆಸರಿನಿಂದ ತನ್ನ ವಯಸ್ಸು ಹೆಚ್ಚಾದಂತೆ ಕೇಳಿಸುತ್ತದೆ ಎಂಬ ವಿಚಿತ್ರ ಭಾವನೆಯಿಂದ ವೆಂಕಿ ಎಂದು ಬದಲಾಯಿಸಿಕೊಂಡಿದ್ದಾರೆ. ಇವರೂ ಒಬ್ಬ ನಾಯಕ.