ಷೂಟಿಂಗ್... ಷೂಟಿಂಗ್...
ಬೆಂಗಳೂರು, ಸೋಮವಾರ, 10 ಡಿಸೆಂಬರ್ 2007( 19:09 IST )
ಅನ್ಯಾಯವಾದಾಗ ಹೀರೋ ಪ್ರತ್ಯಕ್ಷನಾಗಿ ದುಷ್ಟಶಕ್ತಿಗಳನ್ನು ಸದೆಬಡಿದು ಸಂಕಷ್ಟಕ್ಕೆ ಸಿಲುಕಿದವರನ್ನು ಪಾರುಮಾಡುತ್ತಾನೆ. ಹಾಗೆ ತಾನೇ ಸಮಸ್ಯೆಗೆ ಸಿಲುಕುತ್ತಾನೆ. ಇಂಥ ಕಥಾ ಹಂದರವುಳ್ಳ ದೀನ ಷೂಟಿಂಗ್ ಬೆಂಗಳೂರಿನ ಗುಟ್ಟಹಳ್ಳಿಯಲ್ಲಿ ಬಿರುಸಿನಿಂದ ಸಾಗಿದೆ.
ಇದೊಂದು ಅದ್ದೂರಿ ಚಿತ್ರವೆಂದು ನಿರ್ಮಾಪಕರು ಹೇಳಿಕೊಳ್ಳುತ್ತಿದ್ದು, ದೀಪಕ್ ನಾಯಕನಾಗಿ ನಟಿಸುತ್ತಿದ್ದಾರೆ. ಶೇ.60 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ ಎಂದು ನಿರ್ದೇಶಕ ಸಹನಮೂರ್ತಿ ಹೇಳಿದ್ದಾರೆ.
ಎಸ್.ವಿ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೊಸಪೇಟೆ ವಿನೋದ್ ಸಿಂಗ್ ನಿರ್ಮಿಸಿ, ಶಿವಪ್ರಭು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಚಿತ್ರೀಕರಣ ಭರದಿಂದ ನಡೆಯುತ್ತಿದೆ.
ಅನಚಿತ ಪದ್ಮನಾಭ್ ಸಂಭಾಷಣೆ ಮತ್ತು ಸಹನಿರ್ದೇಶನವಿರುವ ಈ ಚಿತ್ರಕ್ಕಾಗಿ ಹೆಸರೆಲ್ಲಾ ಗಾನ, ನೆನಪೆಲ್ಲಾ ಧ್ಯಾನ, ನಗುವಲ್ಲೇ ಕೊಲ್ಲೋ ನಲ್ಲೇ ನೀನೇನಾ ಎಂದು ಸಾಗುವ ಹಾಡಿನ ಚಿತ್ರೀಕರಣ ನಾಗಕಿರಣ್ ಹಾಗೂ ಪಾಯಲ್ ಅಭಿನಯದಲ್ಲಿ ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ ನಡೆದಿದೆ.