ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರ್ದೆಶಕ ಮಧು ವಿಶೇಷ
ಸುದ್ದಿ/ಗಾಸಿಪ್
Feedback Print Bookmark and Share
 
ಸಿನೆಮಾ ಷೂಟಿಂಗ್ ಶುರುವಾಗುವ ಮುನ್ನವೇ ಚಿತ್ರದಲ್ಲಿ ಎಷ್ಟು ಸನ್ನಿವೇಶಗಳಿರಬೇಕು, ಎಷ್ಟು ಹಾಡಿರಬೇಕು ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡ ನಿರ್ದೇಶಕರೇ ಪರ್ಫೆಕ್ಟ್ ಎಂದು ಸಿನಿಮಾ ಮಂದಿಯ ನಂಬಿಕೆ.

ಅದನ್ನು ಸುಳ್ಳುಮಾಡದಂತೆ ಚಿತ್ರದ ಮುಹೂರ್ತದಂದೇ ಒಂದೇ ಉಸುರಿಗೆ ಚಿತ್ರದಲ್ಲಿ ಲವ್ವಿಲ್ಲ, ಕಾಮೆಡಿ ಇಲ್ಲ, 40 ದಿನ ಷೂಟಿಂಗ್, ಸಕಲೇಶಪುರದಲ್ಲಿ ಹದಿನೈದು ದಿನ. ಉಳಿದದ್ದೆಲ್ಲಾ ಬೆಂಗಳೂರಲ್ಲೆ. ಆರು ಹಾಡುಗಳಿವೆ, 64 ಸನ್ನಿವೇಶಗಳಿವೆ ಎಂದು ನಿರ್ದೇಶಕ ನವೀನ್ ಹೇಳಿದರು. ವಾಲ್ಪೋಸ್ಟರ್‌ಗಳನ್ನು ನೋಡಿ ಈ ಚಿತ್ರದ ಮೂಲಕ ನಿರ್ಮಾಪಕರಾಗಲು ಹೊರಟಿರುವುದು ಎ.ಆರ್.ಮಧು. ಅವರ ವಿಶೇಷ.

ಇದೊಂದು ನೈಜ ಜಗತ್ತಿನ ಕತೆ. ಪವನ್, ಮಧು, ಗೌತಮ್ ವೆಂಕಿ ಮತ್ತು ಸುಪ್ರೀತಾ ತಾರಾಬಳಗ. ನಾಲ್ಕು ಜನ ನಾಯಕರಿದ್ದಾರೆ. ಆಕ್ಟರ್ ಎಂಬ ಬಳಗವನ್ನು ಕಟ್ಟಿಕೊಂಡಿರುವ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಅಭಿನಯಿಸಿರುವ ಪವನ್ ಈ ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡುತ್ತಿದ್ದಾರೆ.

ಸುಪ್ರೀತ ನಾಯಕಿ. ರವಿದೇವ್ ಎಂಬ ಹೆಸರಿನ ಯುವಕ ಈ ಹೆಸರಿನಿಂದ ತನ್ನ ವಯಸ್ಸು ಹೆಚ್ಚಾದಂತೆ ಕೇಳಿಸುತ್ತದೆ ಎಂಬ ವಿಚಿತ್ರ ಭಾವನೆಯಿಂದ ವೆಂಕಿ ಎಂದು ಬದಲಾಯಿಸಿಕೊಂಡಿದ್ದಾರೆ. ಇವರೂ ಒಬ್ಬ ನಾಯಕ.