ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಂಸಲೇಖರ ಹೊಂಗನಸು
ಸುದ್ದಿ/ಗಾಸಿಪ್
Feedback Print Bookmark and Share
 
ಕೆಲಬಾರಿ ಚಿತ್ರಗಳು ಹಿಟ್ ಆದರೆ ಅದರ ಹಾಡುಗಳು ಹಿಟ್ ಆಗುತ್ತವೆ. ಅದರ ಸಂಗೀತ ನಿರ್ದೇಶಕರೂ ಗೆಲ್ಲುತ್ತಾರೆ. ಒಂದು ಹಾಡಿಗೆ ಉತ್ತಮವಾಗಿ ಸಂಗೀತ ಸಂಯೋಜನೆ ಮಾಡಿದರೆ ನಿರ್ದೇಶಕ ಅದರ ಚಿತ್ರೀಕರಣಕ್ಕೆ ಆಯ್ಕೆ ಮಾಡುವ ಲೊಕೇಷನ್, ಸುಂದರ ಚಿತ್ರೀಕರಣವೂ ಸಂಗೀತ ನಿರ್ದೇಶಕರಿಗೆ ಹೆಸರು ತರುತ್ತದೆ.

ಹೀಗೆ ಉತ್ತಮ ನಿರ್ದೇಶಕ ಹಾಗೂ ಉತ್ತಮ ಸಂಗೀತ ನಿರ್ದೇಶಕ ಒಟ್ಟು ಗೂಡಿದರೆ ಒಳ್ಳೆ ಜೋಡಿಯಾಗಬಹುದು. ಹಿಂದೆ ತಮಿಳು ಚಿತ್ರರಂಗದಲ್ಲಿ ಭಾರತೀರಾಜ ಹಾಗೂ ಇಳಯರಾಜ ಹೀಗೆ ಉತ್ತಮ ಜೋಡಿ ಆಗಿದ್ದರು. ನೆನಪಿರಲಿ ಚಿತ್ರದ ಮೂಲಕ ರತ್ನಜ ಹೊಸ ಭರವಸೆ ಹುಟ್ಟಿಸಿದ್ದಾರೆ.

ಕೂರಕ್ ಕುಕ್ರಳ್ಳಿ ಕೆರೆ, ತೇಲಕ್ ಕಾರಂಜಿ ಕೆರೆ ಹಾಡನ್ನು ಸುಂದರವಾಗಿ ಚಿತ್ರೀಕರಣ ಮಾಡುವುದರೊಂದಿಗೆ ಹಂಸಲೇಖ ಅವರಿಗೆ ಮೆಚ್ಚುಗೆಯಾಗಿದ್ದಾರೆ. ರತ್ನಜ ನಿರ್ದೇಶನದ ಹೊಂಗನಸು ಚಿತ್ರದ ಕುರಿತು ಹಂಸಲೇಖಾ ಅವರಿಗೆ ಸಾಕಷ್ಟು ವಿಶ್ವಾಸವಿದೆ.

ರತ್ನಜ ಮತ್ತು ಹಂಸಲೇಖ ಕಾಂಬಿನೇಷನ್‌ನಲ್ಲಿ ಹೊಂಗನಸು ಉತ್ತಮ ಚಿತ್ರವಾಗಿ ಹೊರಹೊಮ್ಮಲಿದೆ ಎಂಬುದು ಗಾಂಧಿನಗರದ ನಂಬಿಕೆ. ನಿರ್ದೇಶಕನೊಬ್ಬ ಸಿನೆಮಾದಲ್ಲಿ ಷಾಟ್‌ಗಳನ್ನು ಸಂಯೋಜಿಸುವಾಗ ಸಂಗೀತವನ್ನು ನೆನಪಲ್ಲಿ ಇಟ್ಟುಕೊಳ್ಳಬೇಕು. ಸಂಗೀತವನ್ನು ಫೀಲ್ ಮಾಡಬೇಕು. ಆ ಗುಣ ರತ್ನಜನಿಗಿದೆ ಎನ್ನುತ್ತಾರೆ ಹಂಸಲೇಖ.