ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಭಿನ್ನ ರೀತಿಯಲ್ಲಿ ಪ್ರಚಂಡ ರಾವಣ ಧ್ವನಿಸುರುಳಿ ಬಿಡುಗಡೆ
ಸುದ್ದಿ/ಗಾಸಿಪ್
Feedback Print Bookmark and Share
 
ಇಂದಿನ ದಿನಗಳಲ್ಲಿ ಚಿತ್ರಗಳ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಗಳೇ ಅದ್ದೂರಿಯಾಗಿ ನಡೆಯುತ್ತವೆ.

ಆ ಕಾರ್ಯಕ್ರಮಗಳು ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವುದರಿಂದ ಅಲ್ಲಿ ಕಮರ್ಷಿಯಲ್ ಟಚ್ ಇರುತ್ತದೆ. ಆದರೆ ಸ್ವರ್ಣ ಆಡಿಯೋ ಹೊರತಂದಿರುವ ಪ್ರಚಂಡ ರಾವಣ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಮಾತ್ರ ವಿಭಿನ್ನ ರೀತಿಯಲ್ಲಿ ನಡೆಯಿತು.

ಅಲ್ಲಿ ಉಪಸ್ಥಿತರಿದ್ದ ಹಿರಿಯ ಕಲಾವಿದರಾದ ಬಿ.ಸರೋಜಾದೇವಿ, ಆರ್. ನಾಗರತ್ನಮ್ಮ, ಆರ್.ಪರಮಶಿವನ್, ಮಾಸ್ಟರ್ ಹಿರಣ್ಣಯ್ಯ ಮುಂತಾದವರಿಗೆ ಸನ್ಮಾನಿಸುವ ಮೂಲಕ ಧ್ವನಿಸುರುಳಿ ಬಿಡುಗಡೆ ಗೊಂಡಿತು.

ಹೊನ್ನಪ್ಪ ಭಾಗವತರ್ ಅವರ ಪುತ್ರ ಭರತ್ ಭಾಗವತರ್ ಈ ಎಲ್ಲ ವ್ಯವಸ್ಥೆಯ ಹಿಂದಿನ ರೂವಾರಿಯಾಗಿದ್ದರು. ಸಾಕಷ್ಟು ಪೌರಾಣಿಕ ಚಿತ್ರಗಳಲ್ಲಿ ಅಭಿನಯಿಸಿರುವ ಹಿರಿಯ ನಟಿ ಬಿ.ಸರೋಜಾದೇವಿ ಅವರು ಪೌರಾಣಿಕ ಚಿತ್ರಗಳನ್ನು ನಿರ್ಮಾಣಮಾಡಲು ನಿರ್ಮಾಪಕರು ಮುಂದೆ ಬರಬೇಕು ಎಂದು ಹೇಳಿದರು.

ಒಬ್ಬರೇ ನಿರ್ಮಾಣ ಮಾಡಲು ಧೈರ್ಯವಿಲ್ಲದಿದ್ದರೆ ಕಡೇ ಪಕ್ಷ ನಾಲ್ಕೈದು ಜನ ಒಟ್ಟಾಗಿ ಇಂಥ ಪ್ರಯತ್ನಗಳಿಗೆ ಕೈಹಾಕಬೇಕು ಎಂದರು.

ಹಿಂದೆ ವೃತ್ತಿ ರಂಗಭೂಮಿಯಲ್ಲಿ ಭೀಮ, ದುರ್ಯೋಧನ, ಕೀಚಕ, ಅರ್ಜುನ, ಕುಂಭಕರ್ಣನಂಥ ಪುರುಷ ಪಾತ್ರಗಳನ್ನು ಮಾಡಿದ ಖ್ಯಾತಿ ಹೊಂದಿರುವ ಹಿರಿಯ ಕಲಾವಿದೆ ನಾಗರತ್ನಮ್ಮ, ಕಂಸ ಕಂಡ ಭಯಾನಕ ಕನಸನ್ನು ಸಂಭಾಷಣೆ ಮೂಲಕ ಹೇಳಿ ಸಭಿಕರನ್ನು ಬೆಚ್ಚಿ ಬೀಳುವಂತೆ ಮಾಡಿದರು. ಪ್ರಚಂಡ ರಾವಣ ಚಿತ್ರದಲ್ಲಿ ಒಟ್ಟು 19 ಹಾಡುಗಳಿವೆ. ನ್ಯೂವೇವ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ.