ಚಿತ್ರೀಕರಣ ಮುಗಿಸಿದ ಕೆಂಪ
ಬೆಂಗಳೂರು, ಸೋಮವಾರ, 10 ಡಿಸೆಂಬರ್ 2007( 19:26 IST )
ಕರಿಯ, ಜಾಕ್ಪಾಟ್ ಮೊದಲಾದ ಚಿತ್ರಗಳನ್ನು ನಿರ್ಮಿಸಿದ ಆನೇಕಲ್ ಬಾಲರಾಜ್ ನಿರ್ಮಿಸುತ್ತಿರುವ ಕೆಂಪ ಚಿತ್ರೀಕರಣ ಮುಗಿದಿದೆ.
ಈ ಚಿತ್ರದ ಒಂದು ಹಾಡು ಕುಲು ಮನಾಲಿಯಲ್ಲಿ ಚಿತ್ರೀಕರಣಗೊಂಡಿದೆ. ಅಂದು ಒಮ್ಮೆ ಸುಮ್ಮನೆ ಕದ್ದು ನೋಡಿ ನಿನ್ನನೆ ಎಂದು ಸಾಗುವ ಹಾಡದು. ಗೊಲ್ಲ ಎಂದು ಆ ಚಿತ್ರಕ್ಕೆ ಈ ಮೊದಲು ಹೆಸರಿಡಲಾಗಿದ್ದು, ಗೊಂದಲವುಂಟಾದ ಹಿನ್ನೆಲೆಯಲ್ಲಿ ಚಿತ್ರದ ಟೈಟಲ್ ಕೆಂಪ ಎಂದಾಗಿದೆ.
ಈಗಾಗಲೇ ಗೋಪಿನಾಥಂ, ಮಾದೇಶ್ವರ ಬೆಟ್ಟ, ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಜಗದೀಶ್, ಸಂಗೀತ ಗುರುಕಿರಣ್. ತಾರಾಗಣದಲ್ಲಿ ಸಂತೋಷ್, ತನುಷಿಕ, ಅವಿನಾಶ್, ಶಕೀಲ, ರುಚಿತಾ ಪ್ರಸಾದ್, ಪ್ರತಾಪ್ಸಿಂಗ್ ರುವತ್, ಪ್ರಜ್ಞಾ ಮುಂತಾದವರು ಇದ್ದಾರೆ.