ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪಾನ್ವಾಲಾ ಆಗಲಿರುವ ಶಿವರಾಜ್‌ ಕುಮಾರ್
ಸುದ್ದಿ/ಗಾಸಿಪ್
Feedback Print Bookmark and Share
 
ಪರಮೇಶಿ ಪಾನ್ವಾಲಾ ಶಿವರಾಜ್ ಕುಮಾರ್ ಅವರು ನಾಯಕರಾಗಿರುವ ಹೊಸಚಿತ್ರದ ಹೆಸರು. ಈ ಮೊದಲು ಜೋಗಿಯಾಗಿ ನಂತರ ಮಾದೇಶನಾಗಿ ಅಭಿನಯಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪರಮೇಶಿ.... ಚಿತ್ರವನ್ನು ಆದಿತ್ಯ ಆರ್ಟ್ಸ್ ಬ್ಯಾನರ್ ನಿರ್ಮಿಸುತ್ತಿದೆ. ಇದು ಹೈದರಾಬಾದ್ ಮೂಲದ ಚಿತ್ರ ನಿರ್ಮಾಣದ ಕಂಪನಿ. ಈಗಾಗಲೇ ತೆಲುಗಿನಲ್ಲಿ ಜಗಡಂ ಎಂಬ ಚಿತ್ರವನ್ನು ನಿರ್ಮಿಸಿದೆ.

ಆ ಬ್ಯಾನರ್ನ ಮಾಲೀಕರ ಮಗ ಆದಿತ್ಯಬಾಬು ಅಂತೂ ಇಂತೂ ಪ್ರೀತಿ ಬಂತು ಚಿತ್ರದ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಶಿವರಾಜ್ ಪರಮೇಶಿ ಪಾನ್ವಾಲಾ ಚಿತ್ರವನ್ನು ಮಹೇಶ್ಬಾಬು ನಿರ್ದೇಶಿಸುತ್ತಿದ್ದಾರೆ.

ಅವರು ಈಗಾಗಲೇ ಪುನೀತ್ ರಾಜ್ಕುಮಾರ್ ನಾಯಕನಾಗಿರುವ ಆಕಾಶ್ ಹಾಗೂ ಅರಸು ಚಿತ್ರಗಳನ್ನು ನಿರ್ದೇಶಿಸಿದ್ದು, ಇದೀಗ ಪ್ರಜ್ವಲ್ ನಾಯಕತ್ವದಲ್ಲಿ ಮೆರವಣಿಗೆ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಶಿವಣ್ಣ ಅವರ ಚಿತ್ರವನ್ನು ಮಹೇಶ್ಬಾಬು ನಿರ್ದೇಶಿಸುತ್ತಿರುವುದು ಇದೇ ಮೊದಲು.