ಡಾ. ರಾಜ್ ಕೇಳಿಸಿಕೊಂಡ ಕೊನೆ ಕಥೆ ಬಂಧುಬಳಗ
ಬೆಂಗಳೂರು, ಮಂಗಳವಾರ, 11 ಡಿಸೆಂಬರ್ 2007( 16:04 IST )
ಆರು ವರ್ಷದಿಂದ ಅರವತ್ತು ವರ್ಷದ ವಯೋಮಾನದವರೂ ನೊಡುವಂಥ ಕನ್ನಡ ಚಿತ್ರ ಯಾವುದಾದರೂ ಇದೆಯೇ ಎಂದರೆ ಮೂಗು ಮುರಿಯುವರೇ ಹೆಚ್ಚಾಗಿ ದೊರೆಯುತ್ತಾರೆ.
ಕಥೆಗೆ ಸಂಬಂಧವೇ ಇಲ್ಲದ ಹಾಡುಗಳನ್ನು ಚಿತ್ರಗಳಲ್ಲಿ ತುರುಕುವುದು ಸಾಮಾನ್ಯ. ಎಲ್ಲ ವಯೋಮಾನದವರು ಸಂಕೋಚವಿಲ್ಲದೆ ನೋಡುಬಹುದಾದ ಚಿತ್ರ ಬಂಧುಬಳಗವನ್ನು ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿದ್ದಾರೆ.
ಈ ಚಿತ್ರದ ಕಥೆಗೆ ಇನ್ನೊಂದು ವಿಶೇಷವಿದೆ. ಡಾ. ರಾಜ್‌ಕುಮಾರ್ ಹಾಗೂ ಅವರ ಸಹೋದರ ವರದಪ್ಪ ಅವರು ಬದುಕಿರುವ ತನಕ ತಮ್ಮ ಪುತ್ರರು ಅಭಿನಯಿಸುವ ಚಿತ್ರಗಳ ಕಥೆಯನ್ನು ಕೇಳುತ್ತಿದ್ದರು.
ಅವರು ಓ.ಕೆ. ಮಾಡಿದ ನಂತರವೇ ಶೂಟಿಂಗ್ ಶುರುವಾಗುತ್ತಿತ್ತು. ಈ ಇಬ್ಬರು ಕೇಳಿ ಮೆಚ್ಚಿಕೊಂಡ ಕೊನೆಯ ಕಥೆಯೇ ಬಂಧುಬಳಗ. ಬಹಳ ಚೆನ್ನಾಗಿದೆ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಶಶಿಕುಮಾರ್ ಅವರು ನಟಿಸಿದ್ದು, ನಂತರ ಅವರಿಬ್ಬರ ಅಭಿನಯದಲ್ಲಿ ಬರುತ್ತಿರುವ ಚಿತ್ರವಿದು.
ಈ ಚಿತ್ರದ ನಿರ್ದೇಶಕರು ನಾಗಣ್ಣ. ಚಿತ್ರದ ಟೈಟಲ್ ಹೇಳುವಂತೆ ಇದೊಂದು ಕೌಟುಂಬಿಕ ಚಿತ್ರ. ಸೆಂಟಿಮೆಂಟ್, ಕಾಮೆಡಿಯೂ ಇದೆ. ಹಾಡುಗಳು ಕಥೆಗೆ ತಕ್ಕಂತೆ ಇವೆ. ದೊಡ್ಡಣ್ಣ, ಹೇಮಾಚೌಧರಿ, ಪೂನಂಕೌರ್, ಸ್ವರ್ಣ ಶಾಂತಿ, ಮನ್ದೀಪ್ ರಾಯ್ ಮೊದಲಾದವರು ತಾರಾಗಣದಲ್ಲಿದ್ದಾರೆ.