ಸಾಫ್ಟ್ವೇರ್ ಗೊಂದಲಗಳ ಅಂತೂ ಇಂತೂ ಪ್ರೀತಿ ಬಂತು
ಬೆಂಗಳೂರು, ಮಂಗಳವಾರ, 11 ಡಿಸೆಂಬರ್ 2007( 15:14 IST )
ಹೀರೋಗೆ ಕನ್ನಡ ಬರದು. ಆದರೂ ಆತ ಕನ್ನಡ ಚಿತ್ರದಲ್ಲಿ ಹೀರೋ. ಆಂಧ್ರದಿಂದ ಕನ್ನಡಕ್ಕೆ ಈ ಹೀರೋ ಏಕೆ ಬಂದರು?
ತೆಲುಗಲ್ಲಿ ಚಿತ್ರ ಮಾಡಿದರೆ ಐದು ಕೋಟಿ ರೂ. ಬೇಕು. ಕನ್ನಡದಲ್ಲಿ ಕಡಿಮೆ ಖರ್ಚಿಗೆ ಚಿತ್ರ ನಿರ್ಮಾಣ ಮಾಡಬಹುದು. ಇದು ಈ ಚಿತ್ರ ನಿರ್ಮಾಪಕ ಜಯದೇವ ನಾಯ್ಡು ಅವರನ್ನು ವೀರ್ ಶಂಕರ್ ಒಪ್ಪಿಸಿದ ರೀತಿ.
ನಾಯ್ಡು ಹೀರೋ ಆದಿತ್ಯ ಬಾಬುವಿನ ತಂದೆ. ತೆಲುಗಿನ ಆನಂದಮಾನಂದ ಮಾಯೆ ಚಿತ್ರವನ್ನು ಕರ್ನಾಟಕ ಪರಿಸರಕ್ಕೆ ಒಗ್ಗುವಂತೆ ಕೆಲವು ಬದಲಾವಣೆಗಳೊಂದಿಗೆ ಕನ್ನಡದ ಅಂತು ಇಂತೂ ಪ್ರೀತಿ ಬಂತು ಚಿತ್ರವಾಗಿ ರೂಪಿಸಲಾಗಿದೆ.
ರಮ್ಯ ನಾಯಕಿ. ಹಳ್ಳಿಯಲ್ಲಿರುವ ನಾಯಕಿ ಬೆಂಗಳೂರಿಗೆ ಬಂದು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಸಾಫ್ಟ್ವೇರ್ ಜಗದ ಗೊಂದಲಗಳನ್ನು ಚಿತ್ರ ವಿವರಿಸುತ್ತದೆ. ಅಲ್ಲೇ ಕೆಲಸ ಮಾಡುವ ನಾಯಕ ಹಾಗೂ ನಾಯಕಿ ನಡುವೆ ಪ್ರೀತಿ ಅಂಕುರವಾಗುತ್ತದೆ.
ಅದು ಸಂಕ್ಷಿಪ್ತವಾಗಿ ಕಥೆಯ ಹಂದರ. ನಾಯಕ ನಟ ಆದಿತ್ಯಬಾಬು ಎಲ್ಕೆಟ್ರಾನಿಕ್ ಎಂಜಿನಿಯರ್. ಈ ತಿಂಗಳ 17ರಿಂದ ಚಿತ್ರೀಕರಣ ಶುರುವಾಗುತ್ತದೆ. ಮೊದಲ ಹಂತದ ಚಿತ್ರೀಕರಣದ ಅವಧಿ 40 ದಿನಗಳು. ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್.