ಉಪಯುಕ್ತ ಕನ್ನಡ ಚಿತ್ರ ಕೈಪಿಡಿ
ಬೆಂಗಳೂರು, ಮಂಗಳವಾರ, 11 ಡಿಸೆಂಬರ್ 2007( 15:16 IST )
ಕನ್ನಡ ಚಲನಚಿತ್ರರಂಗದ ಚಟುವಟಿಕೆಗಳ ಕುರಿತು ನಿಗಾವಹಿಸುವವರಿಗೆ ಹಾಗೂ ಸಿನೆಮಾ ಪತ್ರಕರ್ತರಿಗೆ ಉಪಯುಕ್ತವಾಗುವ ಪರಿಷ್ಕ್ರತ ಕೈಪಿಡಿಯನ್ನು ಸಿನೆಮಾ ಪ್ರಚಾರಕರ್ತ ಎಂ.ಜಿ.ಲಿಂಗರಾಜು ಹೊರತಂದಿದ್ದಾರೆ.
ಇದು ಅವರು ಹೊರತರುತ್ತಿರುವ ನಾಲ್ಕನೇ ಕೈಪಿಡಿ. ತಮಿಳು ಚಿತ್ರರಂಗದಲ್ಲಿ ಇಂಥದ್ದೇ ಕೈಪಿಡಿ ಇದೆ. ಕಲಾವಿದರು ಹಾಗೂ ತಂತ್ರಜ್ಞರನ್ನು ಸಂಪರ್ಕಿಸಲು ಇದು ನೆರವಾಗುತ್ತದೆ. ಕಲಾವಿದರು ಹಾಗೂ ತಂತ್ರಜ್ಞರನ್ನು ಸಂಪರ್ಕಿಸಲು ಹೆಣಗಾಡುವ ಅಗತ್ಯವಿರುವುದಿಲ್ಲ. ಈ ಕೈಪಿಡಿಯನ್ನು ರಾಘವೇಂದ್ರ ರಾಜಕುಮಾರ್ ಇತ್ತೀಚಿಗೆ ಯವನಿಕಾದಲ್ಲಿ ಬಿಡುಗಡೆ ಮಾಡಿದರು.
ತಲ್ಲಂ ನಂಜುಂಡಶೆಟ್ಟಿ ಉದ್ಘಾಟಿಸಿದ ಕೈಪಿಡಿ ಬಿಡುಗಡೆ ಸಮಾರಂಭದಲ್ಲಿ ನಟಿ ತಾರಾ, ಕಿರುತೆರೆಯ ನಿರ್ದೇಶಕ ಬಿ.ಸುರೇಶ್, ಮದನ್ ಪಟೇಲ್, ನಟಿ ನೀತೂ, ಸಂಗೀತ ನಿರ್ದೇಶಕ ವಿ.ಮನೋಹರ್, ಸುಂದರ ರಾಜ್ ಮೊದಲಾದವರು ಉಪಸ್ಥಿತರಿದ್ದರು.
ಇದೊಂದು ಉಪಯುಕ್ತ ಕೆಲಸ ಎಂದು ಲಿಂಗರಾಜು ಅವರ ಕಾರ್ಯವನ್ನು ರಾಘವೇಂದ್ರ ರಾಜಕುಮಾರ್ ಕೊಂಡಾಡಿದರು. ಮೂರುವರೆ ಸಾವಿರಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರ ವಿಳಾಸ, ಫೋನ್ ನಂಬರ್‌ಗಳನ್ನು ಈ ಕೈಪಿಡಿ ಒಳಗೊಂಡಿದೆ.